ಕರಾವಳಿ

ಕೆದಂಬಾಡಿ: ರಿಕ್ಷಾ ಚಾಲಕ ಮಹಮ್ಮದ್ ರಫೀಕ್ ನಾಪತ್ತೆ


ಪುತ್ತೂರು:ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ನಿವಾಸಿಯಾಗಿದ್ದು ಪುತ್ತೂರಿನಲ್ಲಿ ಅಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಮಹಮ್ಮದ್ ರಫೀಕ್ ಕೆ (40ವ)ರವರು ಆ.2ರಂದು ರಾತ್ರಿ, ಬಾಡಿಗೆ ಇರುವುದಾಗಿ ತಿಳಿಸಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದಾರೆ.



ಮಹಮ್ಮದ್ ರಫೀಕ್ ಅವರು ಪ್ರತಿದಿನ ಪುತ್ತೂರಿನಲ್ಲಿ
ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಬರುತ್ತಿದ್ದು,ಆ.2ರಂದು ರಾತ್ರಿ ಸಮಯ 7.30ಕ್ಕೆ ಆಟೋ ರಿಕ್ಷಾ ಬಾಡಿಗೆ ಇರುವುದಾಗಿ ಮನೆಯಿಂದ ಹೋದವರು ಮನೆಗೆ ಬಂದಿಲ್ಲ.ಅವರ ಆಟೋ ರಿಕ್ಷಾ ಪುತ್ತೂರು ಖಾಸಗಿ ಬಸ್‌ನಿಲ್ದಾಣದ ಬಳಿ ನಿಲ್ಲಿಸಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಮಹಮ್ಮದ್ ರಫೀಕ್ ಅವರ ಪತ್ನಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!