ಕರಾವಳಿ

ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಆಹಾರ ಪರಿಶೀಲನೆ ಮಾಡಿದ ಶಾಸಕ ಅಶೋಕ್ ರೈ



ಪುತ್ತೂರು: ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿರುವ ಶ್ರೀ. ದಿ. ದೇವರಾಜು ಅರಸುಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರನೆ ಭೇಟಿದ ಶಾಸಕ ಅಶೋಕ್ ರೈ ಅಲ್ಲಿನ ಆಹಾರವನ್ನು ಪರಿಶೀಲಿಸಿದ್ದಾರೆ.



ಕಾರ್ಯಕ್ರಮದ ನಿಮಿತ್ತ ಬನ್ನೂರು ಗ್ರಾಮಕ್ಕೆ ತೆರಳಿದ್ದ ಶಾಸಕರು ದಿಢೀರ್ ಹಾಸ್ಟೆಲ್‌ಗೆ ಭೇಟಿ ನೀಡಿದರು. ಹಾಸ್ಟೆಲ್‌ನಲ್ಲಿನ ಅಡುಗೆ ಕೋಣೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ವಾರ್ಡನ್ ಜೊತೆ ನೇರವಾಗಿ ಅಡುಗೆ ಕೋಣೆಗೆ ಬಂದು ಅಲ್ಲಿ ಮಾಡಿಟ್ಟ ಆಹಾರವನ್ನು ಪರಿಶೀಲನೆ ಮಾಡಿದ್ದಾರೆ. ಮದ್ಯಾಹ್ನದ ಊಟವನ್ನು ಸಿದ್ದಪಡಿಸಲಾಗಿತ್ತು ಮತ್ತು ಸಾಂಬಾರವನ್ನು ತಯಾರು ಮಾಡಲಾಗಿತ್ತು. ಸಾಂಬಾರನ್ನು ಸವಿದ ಶಾಸಕರು ಅದರ ರುಚಿಯನ್ನು ಸವಿದಿದ್ದಾರೆ.

 



ಬಳಿಕ ಅಲ್ಲಿನ ವಾರ್ಡನ್‌ನಲ್ಲಿ ಪ್ರತೀ ದಿನ ಇದೇ ತರ ಆಹಾರವನ್ನು ವಿದ್ಯಾರ್ಥಿನಿಯರಿಗೆ ನೀಡುತ್ತೀರಾ ಎಂದು ಕೇಳಿದ್ದಾರೆ. ಪ್ರತೀ ದಿನ ಬೇರೆ ಬೇರೆ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ, ಉತ್ತಮ ಆಹಾರವನ್ನೇ ನೀಡಲಾಗುತ್ತದೆ ಎಂದು ಹೇಳಿದರು. ಇವತ್ತಿನ ಆಹಾರ ಚೆನ್ನಾಗಿದೆ ಇನ್ನೊಮ್ಮೆ ಈಕಡೆ ಬಂದಾಗ ಭೇಟಿ ನೀಡುತ್ತೇನೆ ಎಂದು ಅಲ್ಲಿಂದ ಹೊರಟರು.




ಹಾಸ್ಟೆಲ್ ಗೆ ಭೇಟಿ ನೀಡಿ ಆಹಾರವನ್ನು ಮತ್ತು ಶುಚಿತ್ವವನ್ನು ಪರಿಶೀಲನೆ ಮಾಡಿದ್ದೇನೆ. ತಯಾರು ಮಾಡಿಟ್ಟ ಆಹಾರ ಚೆನ್ನಾಗಿತ್ತು ತಿಂದು ರುಚಿ ನೋಡಿದೆ. ಸರಕಾರದ ವ್ಯವಸ್ಥೆ ಚೆನ್ನಾಗಿದೆ ಎಂಬುದಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ಮಾಡಿಟ್ಟ ಊಟವೇ ಹೇಳುತ್ತಿತ್ತು. ಶುಚಿತ್ವವೂ ಚೆನ್ನಾಗಿದೆ. ಇನ್ನೊಮ್ಮೆ ಇದೇ ರೀತಿ ಇಲ್ಲಿ ಭೇಟಿ ನೀಡುತ್ತೇನೆ. ಇಲ್ಲಿಗೆ ಮಾತ್ರವಲ್ಲ ತನ್ನ ಕಾರ್ಯಕ್ಷೇತ್ರದಲ್ಲಿರುವ ಎಲ್ಲಾ ಸರಕಾರಿ ಸ್ವಾಮ್ಯದ ಹಾಸ್ಟೆಲ್‌ಗೆ, ಶಾಲೆಗೆ, ಅಂಗನವಾಡಿಗೆ ಭೇಟಿ ನೀಡಿ ಆಹಾರವನ್ನು ಪರಿಶೀಲನೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡಬೇಕೆಂದು ಸರಕಾರದ ನಿರ್ದೇಶನವೂ ಇದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!