ಪುತ್ತೂರು: ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಆರೋಪ: ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಪೊಲೀಸ್ ದೂರು
ಪುತ್ತೂರು: ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿರುವ ಘಟನೆ ಎ.22ರಂದು ಸಂಜೆ ವೇಳೆ ನಡೆದಿದೆ.
ಪಡೀಲ್ ನಲ್ಲಿರುವ ಕೋಳಿ ಅಂಗಡಿಯಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿರುವ ಆರೋಪದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು 1 ಕೆಜಿ ಗೋ ಮಾಂಸವನ್ನು ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ.
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಸಂಘಟನೆ ಕಾರ್ಯಕರ್ತರ ಜೊತೆ ಪೊಲೀಸ್ ಠಾಣೆಗೆ ತೆರಳಿ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.