ಕರಾವಳಿ

ದ.ಕ ಖಾಝಿ ನಿಧನ:
ಶಾಸಕ ಅಶೋಕ್ ರೈ ಸಂತಾಪ


ಪುತ್ತೂರು: ದ ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರ ನಿಧನಕ್ಕೆ ಶಾಸಕ ಆಶೋಕ್ ರೈ ಸಂತಾಪ ಸೂಚಿಸಿದ್ದಾರೆ.


ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ‌ ಸಲ್ಲಿಸುವ ಮೂಲಕ ದ ಕ ಜಿಲ್ಲಾ ಖಾಝಿಯಾಗಿ ಸಮುದಾಯದ ಸೇವೆಯನ್ನುಗೈದಿರುವ ಖಾಝಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಓರ್ವ ಧಾರ್ಮಿಕ ನೇತಾರರಾಗಿದ್ದರೂ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಮಹಾನ್ ಮೇಧಾವಿಯಾಗಿದ್ದರು. ಮೃತರ ಕುಟುಂಬಕ್ಕೆ ನೊವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶಾಸಕರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!