ಕರಾವಳಿ

ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ಲೋಗೋ ಹಾಗೂ ಟ್ಯಾಗ್‌ಲೈನ್ ನೀಡಲು ಆಹ್ವಾನ


ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾದ ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ಸೂಕ್ತವಾದ ಲೋಗೋ ಹಾಗೂ ಟ್ಯಾಗ್‌ಲೈನ್ ಆಯ್ಕೆ ಮಾಡುವ ಉದ್ದೇಶದಿಂದ ಅರ್ಹರಿಂದ ಸೃಜನಾತ್ಮಕ ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.


ಆಸಕ್ತರು ತಮ್ಮ ಕಲ್ಪನೆ ಮತ್ತು ಸೃಜನಶೀಲತೆಯನ್ನು ಬಳಸಿ ವೈದ್ಯಕೀಯ ಸೇವೆ, ಮಾನವೀಯತೆ, ಜ್ಞಾನ, ಸಂಶೋಧನೆ ಹಾಗೂ ಪುತ್ತೂರಿನ ಹೆಮ್ಮೆ ಪ್ರತಿಬಿಂಬಿಸುವ ರೀತಿಯಲ್ಲಿ ಲೋಗೋ ಮತ್ತು ಟ್ಯಾಗ್‌ಲೈನ್ ರೂಪಿಸಬಹುದು.
ಸಲ್ಲಿಕೆಗಳ ಕೊನೆಯ ದಿನಾಂಕ: 20-06-2026
ಸಲ್ಲಿಸಬೇಕಾದ ಸ್ಥಳ:
ಶಾಸಕರ ಕಚೇರಿ, ಪುತ್ತೂರು
ವಿಶೇಷ ಸೂಚನೆ:
ಲೋಗೋ ಹಾಗೂ ಟ್ಯಾಗ್‌ಲೈನ್ ಅನ್ನು ಮುದ್ರಿತ (Print) ರೂಪದಲ್ಲಿ ಸಲ್ಲಿಸುವಂತೆ ವಿನಂತಿಸಲಾಗಿದೆ.

ಇದು ಯಾವುದೇ ಸ್ಪರ್ಧೆಯಲ್ಲ. ಪುತ್ತೂರಿನ ಭವಿಷ್ಯದ ಆರೋಗ್ಯ ಕ್ಷೇತ್ರದ ಮಹತ್ವದ ಯೋಜನೆಗೆ ಜನರ ಸೃಜನಾತ್ಮಕ ಕೊಡುಗೆಯನ್ನು ಆಹ್ವಾನಿಸುವ ಒಂದು ಸಾರ್ವಜನಿಕ ಉಪಕ್ರಮವಾಗಿದೆ. ಆಯ್ಕೆಯಾಗುವ ಲೋಗೋ ಮತ್ತು ಟ್ಯಾಗ್‌ಲೈನ್ ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಶಾಶ್ವತ ಗುರುತಾಗಿ ಉಳಿಯಲಿದೆ.
“ಪುತ್ತೂರಿನ ಆರೋಗ್ಯ ಭವಿಷ್ಯಕ್ಕೆ ನಿಮ್ಮ ಸೃಜನಶೀಲತೆಯ ಸ್ಪರ್ಶ ನೀಡಿ ಹಾಗೂ ಬಹುಮಾನ ಗೆಲ್ಲಿ “
ಹೆಚ್ಚಿನ ಮಾಹಿತಿಗಾಗಿ 9972589370

 

Leave a Reply

Your email address will not be published. Required fields are marked *

error: Content is protected !!