ದ್ವಿತೀಯ ಪಿಯುಸಿ ಫಲಿತಾಂಶ: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಹಬೀಬ ರಾಜ್ಯಕ್ಕೆ 7ನೇ ಸ್ಥಾನ
ಪುತ್ತೂರು: ದ್ವಿತೀಯ ಪದವಿಪೂರ್ವ ವಿಭಾಗದ ವಾಣಿಜ್ಯ ವಿಭಾಗದ ಪರೀಕ್ಷೆ 2 ರಲ್ಲಿ ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಬೀಬ ಗಡಿಯಾರ ವಾಣಿಜ್ಯ ವಿಭಾಗದಲ್ಲಿ 99% ಅಂಕಗಳಿಸುವ ಮೂಲಕ ರಾಜ್ಯಕ್ಕೆ ಏಳನೇ ಸ್ಥಾನವನ್ನು ಗಳಿಸಿರುತ್ತಾರೆ.
ಕಳೆದ ಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಒಂಬತ್ತನೇ ಸ್ಥಾನವನ್ನು ಪಡೆದಿದ್ದ ಇವರು ಪರೀಕ್ಷೆ 2 ಬರೆಯುವ ಮೂಲಕ ವಿಜ್ಞಾನ ಮತ್ತು ಕಲಾ ವಿಭಾಗದ ಮತ್ತೆರಡು ವಿದ್ಯಾರ್ಥಿನಿಯರು ಹೆಚ್ಚುವರಿ ಫಲಿತಾಂಶವನ್ನು ಪಡೆದಿದ್ದು ಸಂಸ್ಥೆಯ ಬಹುತೇಕ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯನ್ನು ಗಳಿಸಿದ್ದು ಈ ಮೂಲಕ 100% ಫಲಿತಾಂಶ ಪಡೆದಿದೆ. ಹಬೀಬ ಅವರು ಗಡಿಯಾರ ಅಬ್ಬಾಸ್ ರವರ ಪುತ್ರಿ.




