Uncategorized

ಬೆಳ್ತಂಗಡಿ: ಭೀಕರ ರಸ್ತೆ ಅಪಘಾತ;  ಮಹಿಳೆ ಸ್ಥಳದಲ್ಲೇ ಸಾವು


  ಬೆಳ್ತಂಗಡಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ದುರ್ಮರಣ ಹೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕನ್ನಡಿಕಟ್ಟೆ ಬಳಿ ನಡೆದಿದೆ.




ಬಳಂಜದ ಪ್ರಸಿದ್ದ ಅನಿಲ್ ಪಾರ್ಮ್ ನ ಅನಿಲ್ ಭಟ್ ಅವರ ಪತ್ನಿ ಶೈಲಜಾ (30) ಅಪಘಾತದಲ್ಲಿ ಸಾವೀಗೀಡಾದ ಮಹಿಳೆ.
ಅನಿಲ್ ಭಟ್ ಮತ್ತು ಅವರ ಪತ್ನಿ ಶೈಲಜಾ ಅವರು ತಮ್ಮ ಪಾರ್ಮ್ ನ ಕೆಲಸ ಮುಗಿಸಿ ಅವರ ಸೈಟ್ ಗೆ ಬೈಕ್ ನಲ್ಲಿ ತೆರಳುದಿದ್ದಾಗ ಕನ್ನಡಿಕಟ್ಟೆ ಬಳಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಪೋಲಿಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!