ಅರಿಯಡ್ಕ ಗ್ರಾಮದ ಕೌಡಿಚ್ಚಾರ್- ಗುಂಡ್ಯಡ್ಕ- ಮಾಯಿಲಕೊಚ್ಚಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರ್- ಗುಂಡ್ಯಡ್ಕ- ಮಾಯಿಲಕೊಚ್ಚಿ ರಸ್ತೆಗೆ ಶಾಸಕ ಅಶೋಕ್ ರೈ ಅವರು ರೂ.15 ಲಕ್ಷ ಅನುದಾನ ಒದಗಿಸಿದ್ದು ಅದರ ಕಾಮಗಾರಿಗೆ ಶಿಲಾನ್ಯಾಸ ಮೇ.9ರಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು. ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು ಸೇರಿದಂತೆ ಹಲವರು ಉಪಸಿತರಿದ್ದರು.




