ತಮಿಳು ಕಾಲನಿ ರಸ್ತೆ ಅಭಿವೃದ್ದಿಗೆ
ಶಾಸಕ ಅಶೋಕ್ ರೈ ಗೆ ಮನವಿ
ಪುತ್ತೂರು: ಕೊಳ್ತಿಗೆ ಗ್ರಾಮದ ಮೊಗಪ್ಪೆ ಸಿ ಆರ್ ಸಿ ಕಾಲನಿಗೆ ತೆರಳುವ ರಸ್ತೆ ಅಭಿವೃದ್ದಿ ಮಾಡುವಂತೆ ಶಾಸಕ ಅಶೋಕ್ ರೈ ಅವರಿಗೆ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ರೂಪರಾಜ್ ಮನವಿ ಸಲ್ಲಿಸಿದ್ದಾರೆ.

ಈ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರ ಮಾಡಲು ಅಯೋಗ್ಯವಾಗಿದ್ದು ಕಾಲನಿ ನಿವಾಸಿಗಳು ಅನೇಕ ವರ್ಷಗಳಿಂದ ರಸ್ತೆ ಅಭಿವೃದ್ದಿಗೆ ಮನವಿ ಸಲ್ಲಿಸುತ್ತಿದ್ದಾರೆ. ಈ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅನುದಾನ ಒದಗಿಸಿ ಅಭಿವೃದ್ದಿ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.



