ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಆಕ್ರೋಶ
ಬೆಂಗಳೂರು : ಕೇಂದ್ರದ ಮೋದಿ ನೇತೃತ್ವದ ಸರಕಾರ ಅಚ್ಚೇ ದಿನ್ ಭರವಸೆ ನೀಡಿ ಇದೀಗ ದುಬಾರಿ ದರ್ಬಾರ್ ಆಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯನ್ನು 200 ರೂ.ಹೆಚ್ಚಿಸಲಾಗಿದ್ದು ಕೇವಲ 45 ದಿನಗಳಲ್ಲಿ 3 ಬಾರಿ ಏರಿಕೆಯಾಗಿದೆ. ಬಿಜೆಪಿ ನಾಯಕರು ಮತ ಕೇಳುವ ಮೊದಲು ಸಾಮಾನ್ಯ ಜನರಿಗೆ ಉತ್ತರ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ ತಿಂಗಳಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆಗಳು ಎರಡು ಬಾರಿ ಏರಿಕೆಯಾಗಿ, ಪ್ರತಿ ಸಿಲಿಂಡರ್ಗೆ 913 ರೂ.ತಲುಪಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು, ಶೀಘ್ರದಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗುವುದರ ಮುನ್ಸೂಚನೆಯಾಗಿದೆ ಎಂದರು. .



