ಕರಾವಳಿರಾಜ್ಯ

ಪುತ್ತೂರು-ಜಾವಗಲ್ ಬಸ್‌ಗೆ ಜಾವಗಲ್‌ನಲ್ಲಿ ಅದ್ದೂರಿ ಸ್ವಾಗತ

ಪುತ್ತೂರು: ಪುತ್ತೂರು-ಜಾವಗಲ್ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಮಾ.31ರಂದು ಚಾಲನೆ ನೀಡಿದ್ದು ಅದರಂತ ಪುತ್ತೂರಿನಿಂದ ಎ.1ರಂದು ಮೊದಲ ಬಸ್ ಸಂಚಾರ ಜಾವಗಲ್‌ಗೆ ತೆರಳಿತು.

ಬೆಳಿಗ್ಗೆ 8 ಗಂಟೆಗೆ ಪುತ್ತೂರಿನಿಂದ ಹೊರಟ ಬಸ್ ಮದ್ಯಾಹ್ನದ ವೇಳೆ ಜಾವಗಲ್ ತಲುಪಿದ್ದು ಈ ಸಂದರ್ಭದಲ್ಲಿ ಬಸ್ಸನ್ನು ಸ್ವಾಗತಿಸಲಾಯಿತು. ಕಾಂಗ್ರೆಸ್ ಇಂಟಕ್ ಹಾಸನ ಜಿಲ್ಲಾ ಉಪಾಧ್ಯಕ್ಷ ಕಲಂದರ್ ಶಾಕಿರ್ ನೇತೃತ್ವದಲ್ಲಿ ಸ್ವಾಗತಿಸುವ ಕಾರ್ಯಕ್ರಮ ನಡೆದಿದ್ದು ಜಾವಗಲ್ ಹಳೆಬೀಡು ಅಲ್ಪಸಂಖ್ಯಾತ ಘಟಕದ ಹೋಬಳಿ ಅಧ್ಯಕ್ಷ ನವಾಜ್ ಪಾಶ, ಸಯ್ಯದ್ ಶಾಫಿ, ಸಯ್ಯದ್ ಝುಬೇರ್, ಸಯ್ಯದ್ ಶಕೀಲ್, ಮುಹಮ್ಮದ್ ಹನೀಫ್, ನಾದಿರ್, ಜುನೈದ್, ಇಸ್ಮಾಯಿಲ್, ಸಯ್ಯದ್ ರಿಯಾಝ್, ಶಾರೂಕ್, ಸುಹೈಲ್, ಮನ್ಸೂರ್ ಉಪಸ್ಥಿತರಿದ್ದರು. ಜಾವಗಲ್‌ಗೆ ಬಸ್ ಸಂಚಾರ ಪ್ರಾರಂಭಗೊಳ್ಳುವ ವಿಚಾರದಲ್ಲಿ ಮುಖ್ಯ ಪಾತ್ರ ವಹಿಸಿರುವ ವಿ.ಎಚ್ ಅಬ್ದುಲ್ ಶಕೂರ್ ಹಾಜಿಯವರು ಪುತ್ತೂರಿನಿಂದ ಬಸ್‌ನಲ್ಲಿ ಜಾವಗಲ್‌ಗೆ ತೆರಳಿದ್ದು ಅವರನ್ನು ಜಾವಗಲ್‌ನಲ್ಲಿ ಶಾಲು ಹಾಕಿ, ಮಾಲಾರ್ಪಣೆ ಮಾಡಿ ಸ್ವಾಗತಿಸಿ ಅಭಿನಂದಿಸಲಾಯಿತು. ಜಾವಗಲ್‌ನಲ್ಲಿ ಬಸ್‌ಗೆ ಸ್ವಾಗತ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ಲ ಮೆನಸಿನಕಾಣ, ಆಲಿ ತಂಬುತ್ತಡ್ಕ, ತಾಜು ರಫೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!