Uncategorized

ಕೋಮುದ್ವೇಷ ಪ್ರಚೋದನೆ ವೀಡಿಯೊ ಹಂಚಿದ ಆರೋಪ: ಆರೋಪಿಯ ಬಂಧನ


ಮಂಗಳೂರು: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ 2025ರ ಅಕ್ಟೋಬ‌ರ್ ನಲ್ಲಿ ‘ನಝೀರ ಮಂಗಳೂರು’ ಎಂಬ ಫೇಸ್‌ಬುಕ್ ಖಾತೆಯಿಂದ ಎಐ ತಂತ್ರಾಶದಲ್ಲಿ ತಿರುಚಿದ ವೀಡಿಯೊವನ್ನು ಶೇರ್ ಮಾಡಿ ಸಮಾಜದಲ್ಲಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಚೋದಿಸಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.



ಬಡಗಬೆಳ್ಳೂರು ಗ್ರಾಮದ ಕೊಳ್ತಮಜಲಿನ ಮುಹಮ್ಮದ್ ರಫೀಕ್ (38ವ )ಬಂಧಿತ ಆರೋಪಿ. ಈತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
“ನಝೀರ ಮಂಗಳೂರು” ಎಂಬ ಫೇಸ್ಬುಕ್ ಖಾತೆಯಿಂದ ಆರೋಪಿಯು ವೀಡಿಯೊ ಶೇರ್ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿತ್ತು.
ಆರೋಪಿಯನ್ನು ಮಾ.22ರಂದು ಬೆಂಗಳೂರಿನಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!