ಕರಾವಳಿಕ್ರೈಂ

ಸುಳ್ಯ: ಕಳ್ಳತನ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

ಸುಳ್ಯ:  ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17/08/2025ರಂದು ನಡೆದ ಹಾಲಿನ ಡೈರಿ ಹಾಗೂ ದಿನಸಿ ಅಂಗಡಿ ಕಳವು  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಾ.18ರಂದು ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್ ರವರು, ಆರೋಪಿ ಕೇರಳ ಮೂಲದ ಸತೀಶ್ (45) ಎಂಬಾತನಿಗೆ, ಕಲಂ 331(4) BNS ರಲ್ಲಿ 6 ತಿಂಗಳ ಸಾಧಾರಣ ಸಜೆ ಹಾಗೂ 500 ದಂಡ. ಕಲಂ 305 BNS ರಲ್ಲಿ 7 ತಿಂಗಳ ಸಾಧಾರಣ ಸಜೆ ಹಾಗೂ 500 ದಂಡ. ಹಾಗೂ ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು ನೀಡಿ ಆದೇಶಿಸಿದ್ದಾರೆ.


ಸದ್ರಿ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಪಿ.ಎಸ್.ಐ ಕಾರ್ತಿಕ್ ರವರು ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಿ ರವರು ವಾದ ಮಂಡನೆ ನಡೆಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!