ಬೆಳ್ತಂಗಡಿ: ಅನ್ಯ ಧರ್ಮದ ವಿದ್ಯಾರ್ಥಿಗಳ ಜೊತೆ ಜಾತ್ರೆಗೆ ಬಂದಿದ್ದಕ್ಕೆ ಬಾಲಕನ ಮೇಲೆ ಹಲ್ಲೆ

ಬೆಳ್ತಂಗಡಿ: ತಾಲೂಕಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಪ್ರಾಯದ (17 ವರ್ಷ)ಬಾಲಕನು, ಮಾ.11ರಂದು ಸಂಜೆ, ತನ್ನ ಶಾಲಾ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದು ಈ ವೇಳೆ ಜಾತ್ರಾ ಸ್ಥಳದಲ್ಲಿದ್ದ ಕೆಲವರು, ತಮ್ಮ ಧರ್ಮದ ಹುಡುಗಿಯರೊಂದಿಗೆ ಅನ್ಯ ಧರ್ಮದ ಬಾಲಕನು ಜಾತ್ರೆಗೆ ಬಂದಿರುವುದಾಗಿ ಆಕ್ಷೇಪಿಸಿ, ಬಾಲಕನಿಗೆ ಹಲ್ಲೆ ನಡೆಸಿ ನಿಂದಿಸಿದ್ದು ಬಾಲಕನನ್ನು ಅಲ್ಲಿಂದ ಬೈಕಿನಲ್ಲಿ ದೂರ ಕರೆತಂದು ಹಲ್ಲೆ ನಡೆಸಿ, ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಕಳುಹಿಸಿರುತ್ತಾರೆ. ಈ ಘಟನೆಯಿಂದ ಬಾಲಕನು ಕೆಲದಿನಗಳಿಂದ ಭಯಭೀತನಾಗಿದ್ದಾನೆ ಎಂಬುದಾಗಿ ಬಾಲಕನ ತಂದೆ ದಿನಾಂಕ: 18.03.2026 ರಂದು ತಡವಾಗಿ ಬಂದು ದೂರು ನೀಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 30/2026, ಕಲಂ: 137(2), 115(2), 351(2) , 352, 353(2) ಜೊತೆಗೆ 190 ಬಿಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.





