ಕರಾವಳಿ

ಪುತ್ತೂರು: ಸಂಟ್ಯಾರ್‌ ಬಳಿ ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು

ಪುತ್ತೂರು: ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರೊಂದು ಪರಾರಿಯಾದ ಘಟನೆ ಮಾ.12ರಂದು ಸಂಟ್ಯಾರ್ ಬಳಿ ನಡೆದಿದೆ.

ಬಂಟ್ವಾಳ ನಿವಾಸಿ ರವಿ. ಬಿ (27) ಎಂಬವರ ದೂರಿನಂತೆ, ಸದ್ರಿಯವರು ಮಾ.12ರಂದು ಸಂಜೆ, ಕಾರ್ತಿಕ್‌ ಎಂಬವರ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಹಾಗೂ ಕಾರ್ತಿಕ್‌ ರವರು ಸವಾರನಾಗಿ, ಮಾಣಿ ಮೈಸೂರು ರಾಷ್ಟೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಟ್ಯಾರ್‌ ಜಂಕ್ಷನ್‌ ಎಂಬಲ್ಲಿ ತಲುಪಿದಾಗ, ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ತೀರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕ್‌ ಗೆ ಡಿಕ್ಕಿಪಡಿಸಿರುತ್ತಾನೆ. ಅಪಘಾತದ ಪರಿಣಾಮ ನಾವು ರಸ್ತೆಗೆ ಎಸೆಯಲ್ಪಟ್ಟು ಗಾಯಗಳಾಗಿದ್ದು, ಕಾರಿನ ಚಾಲಕನು ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಅಲ್ಲಿದ್ದ ಸಾರ್ವಜನಿಕರು ನಮ್ಮನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಅಪಘಾತ ನಡೆದ ಬಳಿಕ ಸದ್ರಿ ಕಾರಿನ ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅನೇಕ ದ್ವಿಚಕ್ರ ವಾಹನಗಳಿಗೆ ಡಿಕ್ಕಿಪಡಿಸಿದ್ದು, ದ್ವಿಚಕ್ರ ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:42/2026, ಕಲಂ: 281, 125(ಎ) ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಕಲಂ: 134(ಎ&ಬಿ) ಐಎಂವಿ ಆಕ್ಟ್‌ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!