ಕರಾವಳಿಕ್ರೈಂ

ಬೆಳ್ತಂಗಡಿ: ಮನೆಯಗಳದಲ್ಲಿದ್ದ ಚೆಂಡಿನಾಕಾರಾದ ಸ್ಫೋಟಕ ಸಿಡಿದು ಬಾಲಕನಿಗೆ ಗಾಯ



ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂಥ ಆಕಾರದ ಸ್ಫೋಟಕವೊಂದು ಸ್ಪೋಟಗೊಂಡ ಪರಿಣಾಮ ಬಾಲಕನೋರ್ವ ಗಾಯಗೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಈ ಬಗ್ಗೆ ಜಯಶ್ರೀ ಎಂಬವರು ದೂರು ನೀಡಿದ್ದು ಮನೆಯ ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂತಹ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ. ಈ ಸಂದರ್ಭ ಅದು ಸಿಡಿದು ಹೊಗೆ ಬಂದು ಸ್ಫೋಟಗೊಂಡಿದ್ದು ತೀವ್ರತೆಗೆ ಬಾಲಕನ ಕಾಲಿಗೆ ಗಾಯಗಳಾಗಿದೆ.



ಕಾಡು ಪ್ರಾಣಿಗಳನ್ನು ಬೇಟೆಯಾಡಲು ತಯಾರಿಸುವ ಕಚ್ಚಾ ಸ್ಫೋಟಕ ಇದಾಗಿದ್ದು, ಯಾರೋ ಕಾಡು ಪ್ರದೇಶದಲ್ಲಿ ಇಟ್ಟಿದ್ದ ಸ್ಪೋಟಕವನ್ನು ನಾಯಿಗಳು ಎಳೆದು ತಂದು ಮನೆಯಂಗಳದಲ್ಲಿ ಹಾಕಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!