ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜಿನಲ್ಲಿ ‘ಪ್ರೇರಣಾ ಪಯಣ’ ಕಾರ್ಯಕ್ರಮ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ‘ಪ್ರೇರಣಾ ಪಯಣ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಿ.ಎಸ್.ಡಬ್ಲ್ಯು.ಸಿ. ಕೇಂದ್ರೀಯ ವೀಕ್ಷಕ ನಿಯಾಝ್ ವಾಫಿ ಕೋಯಿಕ್ಕೋಡ್ ಅವರು ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಹೊಸ ಗುರಿ ಮತ್ತು ಹೊಸ ಚಿಂತನೆಗಳೊಂದಿಗೆ ಆ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದರು. ಇಂದಿನ ಡಿಜಿಟಲ್ ಯುಗದಲ್ಲಿ ಅವಕಾಶಗಳು ಬಹಳಷ್ಟಿದೆ, ಆದರೆ ಅವುಗಳ ಸದ್ಬಳಕೆ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದರು.
ಸಿ.ಎಸ್.ಡಬ್ಲ್ಯು.ಸಿ. ಪ್ರತಿನಿಧಿ ಫಾರಿಸ್ ಪಹದ್ ದಾರಿಮಿ, ‘ಸಮಸ್ತ’ ದ ಫಾಳಿಲಾ – ಫಳೀಲಾ ಪಠ್ಯಕ್ರಮದ ಮೂಲಕ ವಿದ್ಯಾರ್ಥಿನಿಯರು ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣದ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಮಾರ್ಗದರ್ಶನ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಮಾತನಾಡಿ, ಅಸ್ವಾಲಿಹಾ ಕಾಲೇಜಿನಲ್ಲಿ ಸಮನ್ವಯ ಶಿಕ್ಷಣವನ್ನು ಪಡೆದ ವಿದ್ಯಾರ್ಥಿನಿಯರು ಶಿಕ್ಷಣ ಮತ್ತು ಪ್ರತಿಭಾ ವೇದಿಕೆಗಳಲ್ಲಿ ತೋರಿಸಿರುವ ವಿಶೇಷ ಸಾಧನೆ ಶ್ಲಾಘನೀಯ ಎಂದು ಪ್ರಶಂಶಿಸಿದರು. ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ಕೊನೆಗೆ ವಂದಿಸಿದರು.
ಎಫ್.ಎಸ್.ಒ ಮೀಟ್:
ಸಭಾ ಕಾರ್ಯಕ್ರಮದ ಬಳಿಕ, ಕಾಲೇಜಿನ ಫಾಳಿಲಾ ವಿದ್ಯಾರ್ಥಿನಿಯರ ಎಫ್.ಎಸ್.ಒ. ಮೀಟ್ ಹಾಗೂ ವಿವಿಧ ಪ್ರತಿಭಾ ಕಾರ್ಯಕ್ರಮಗಳು ಕಾಲೇಜಿನ ಉಪನ್ಯಾಸಕಿಯರ ಮಾರ್ಗದರ್ಶನದಲ್ಲಿ ನಡೆಯಿತು.



