ಮೀಫ್ ಅಂತರ್ ಜಿಲ್ಲಾ ಕ್ರೀಡಾಕೂಟ: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜು ಥ್ರೋ ಬಾಲ್ ನಲ್ಲಿ ದ್ವಿತೀಯ
ಬಂಟ್ವಾಳ: ಕಲ್ಲಡ್ಕ ಗೋಳ್ತಮಜಲು ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಇಲ್ಲಿನ ವಿದ್ಯಾರ್ಥಿನಿಯರು ಇತ್ತೀಚೆಗೆ ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಒಕ್ಕೂಟ ಮೀಫ್ (MEIF) ವತಿಯಿಂದ ಮಂಗಳೂರಿನ ಬಬ್ಬುಕಟ್ಟೆಯಲ್ಲಿರುವ ಹಿರಾ ಮಹಿಳಾ ಕಾಲೇಜಿನವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀಫ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ ಅಂತರ್ ಜಿಲ್ಲಾ ಕ್ರೀಡಾ ಸ್ಪರ್ಧೆಯ ಥ್ರೋ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಕ್ರೀಡಾ ಕ್ಷೇತ್ರದಲ್ಲಿನ ಹಲವು ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಸಾಧನೆ ಮಾಡಿರುವ ಇಲ್ಲಿನ ವಿದ್ಯಾರ್ಥಿನಿಯರು ಕಳೆದ
ಪ್ರಥಮ ವಿಜ್ಞಾನ ವಿಭಾಗದ ನೂಹ ಮರಿಯಮ್
ಹೈದರ್, ಬಿ. ಜೈನಬ್ ನಸ್ರೀನ್, ದ್ವಿತೀಯ ಕಲಾ ವಿಭಾಗದ ಮೈಮುನ ತನ್ವಿಲ, ದ್ವಿತೀಯ ವಾಣಿಜ್ಯ ವಿಭಾಗದ ಅಶ್ಮಿಯ, ಅಲಿಫಾ ಆಯಿಷ, ರಫಾ, ಜುವೇರಿಯಾ, ಸಫ್ರೀನ,
ಬಿ.ಎಸ್ ಶಬೀಬಾ ಆಫಿಯಾ ಪ್ರಥಮ ವಾಣಿಜ್ಯ ವಿಭಾಗದ ಆಯಿಷತ್ ರುಷೀದ, ನೆಬಿಸತ್ ಹಿಬಾ, ನಫೀಸತ್ತುಲ್ ಶಹಲ ಮೊದಲಾದವರು ಥ್ರೋ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪ್ರಥಮ ವಾಣಿಜ್ಯ ವಿಭಾಗದ ಆಯಿಷತ್ ರುಷೀದರವರು ಬೆಸ್ಟ್ ಥ್ರೋವರ್ ಅವಾರ್ಡನ್ನು ತಮ್ಮದಾಗಿಸಿಕೊಂಡರು. ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಿಗೆ ಪ್ರತ್ಯೇಕವಾಗಿ ಏರ್ಪಡಿಸಲಾದ ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 37 ವಿದ್ಯಾಸಂಸ್ಥೆಗಳು ಭಾಗವಹಿಸಿದ್ದವು.
ಹಿರಾ ಮಹಿಳಾ ಕಾಲೇಜು ಬಬ್ಬುಕಟ್ಟೆ ಇದರ ಅಬ್ದುಲ್ ರಹಮಾನ್ ಹಾಗೂ ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕ ಇದರ ಕೋಶಾಧಿಕಾರಿ ಹೈದರ್ ಅಲಿಯವರು ಪಂದ್ಯಾವಳಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.



