ಕರಾವಳಿಕ್ರೈಂ

ಪೋಳ್ಯದಲ್ಲಿ ನಡೆದ ಅಪಘಾತ: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕಬಕ ಗ್ರಾಮದ ಪೋಳ್ಯದಲ್ಲಿ ಸ್ಕೂಟರ್‌ನ ಹಿಂಬದಿಗೆ ಕಾರೊಂದು ಡಿಕ್ಕಿಯಾದ ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.11ರಂದು ಸಂಜೆ ಮಹಮ್ಮದ್ ತೌಫಿಕ್ ಎಂಬವರು ಚಲಾಯಿಸುತ್ತಿದ್ದ ಕಾರು, ಕಬಕ ಗ್ರಾಮದ ಪೋಳ್ಯ ಸಮೀಪ ಕಾರಿನ ಮುಂದೆ ಶಶಿಕುಮಾರ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶಶಿಕುಮಾರ್‌ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಎಸಗಿದ ಆರೋಪಿ ಕಾರು ಚಾಲಕ ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫಿಕ್ (29ವ) ಎಂಬವರು ಅಪಘಾತ ನಡೆದ ವೇಳೆ ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯ ವೇಳೆ ದೃಢಪಟ್ಟಿರುತ್ತದೆ ಹಾಗೂ ಇತ್ತೀಚೆಗೆ ನಡೆದ ಇನ್ನೊಂದು ಅಪಘಾತ ಕರಣದಲ್ಲಿ ಆರೋಪಿ ಮಹಮ್ಮದ್ ತೌಫಿಕ್ ಅವರ ನಿರ್ಲಕ್ಷತನದಲ್ಲಿ ನಿರ್ಲಕ್ಷತನದಲ್ಲಿ ವಾಹನ ಚಾಲನೆ ನಡೆಸಿದ ಪರಿಣಾಮ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ದ ಪುತ್ತೂರು ‘ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ, ಕಲಂ: 110 ಬಿಎನ್‌ಎಸ್ ಅನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ, ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!