ಗಾಝಾ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಮೃತ್ಯು
ಗಾಜಾದಾದ್ಯಂತ ಇಸ್ರೇಲ್ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೆಳಗ್ಗೆಯಿಂದ ಗಾಜಾ ಪಟ್ಟಿಯ ಮೇಲೆ ನಿರಂತರ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದ ಈ ಸಾವು ಆಗಿದ್ದು, ಗಾಜಾ ನಗರದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ. ಮಧ್ಯ ಗಾಜಾದಲ್ಲಿ 14 ಮತ್ತು ದಕ್ಷಿಣದ ಪ್ರಾಂತ್ಯದಲ್ಲಿ 28 ಮೃತ ದೇಹಗಳು ಕಂಡು ಬಂದಿದೆ ಎಂದು ವರದಿಯಾಗಿದೆ. ಕೆಲವರು ವೈಮಾನಿಕ ದಾಳಿಯಲ್ಲಿ, ಇತರರು ಡ್ರೋನ್ ಬೆಂಕಿ ಮತ್ತು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.