ಗೃಹಲಕ್ಷ್ಮೀ ಹಣ ಕೂಡಿಟ್ಟು ಹೊಸ ವಾಷಿಂಗ್ ಮೆಷಿನ್ ಖರೀದಿಸಿದ ಮಹಿಳೆ
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಮನೆಗೆ ಹೊಸ ವಾಷಿಂಗ್ ಮೆಷಿನ್ ಖರೀದಿಸಿ ಸುದ್ದಿಯಾಗಿದ್ದಾರೆ.

ಬೆಂಗಳೂರು ದಕ್ಷಿಣದ ರಾಮನಗರದಲ್ಲಿ ಗೃಹ ಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಖರೀದಿಸಿದ್ದಾರೆ. ಫಲಾನುಭವಿ ವಾಷಿಂಗ್ ಮೆಷಿನ್ ಖರೀದಿಸಿ, ಆಯುಧ ಪೂಜೆಯಂದು ಪೂಜೆ ಮಾಡಿದ್ದಾರೆ.
ಈ ಕುರಿತ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ನವರಾತ್ರಿ ವೇಳೆ ಮಹಿಳೆಯೊಬ್ಬರ ಸಂಭ್ರಮಕ್ಕೆ ಯೋಜನೆ ಕಾರಣವಾಗಿರುವುದು ಸಾರ್ಥಕ ತರಿಸಿದೆ ಎಂದು ಹೇಳಿದ್ದಾರೆ.
ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆ ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹಾನವಮಿಯ ದಿನ ಹೊಸ ವಾಷಿಂಗ್ ಮೆಷಿನ್ ಖರೀದಿಸಿ, ಪೂಜಿಸುತ್ತಿರುವ ವೀಡಿಯೋ ವೈರಲ್ ಆಗಿದೆ.