ವಿಟ್ಲ: ಫೇಸ್ಬುಕ್ ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಮೆಂಟ್, ಪ್ರಕರಣ ದಾಖಲು

ವಿಟ್ಲ: ಮೊಬೈಲ್‌ನಲ್ಲಿ ಪೇಸ್‌ಬುಕ್ ಅಪ್ಲಿಕೇಶನ್ ಅನ್ನು ನೋಡುತ್ತಿರುವಾಗ ಅದರಲ್ಲಿ Vartha Bharati ಎಂಬ ಪೇಸ್‌ಬುಕ್ ಪೇಜ್‌ನವರು ಹಾಕಿರುವ ನ್ಯೂಸ್ ರೀತಿಯ ಪೋಸ್ಟ್ ಗೆ ಹಲವರು comment ಗಳನ್ನು ಹಾಕಿದ್ದು, ಈ ಪೈಕಿ ಸನಾತನಿ ಸಿಂಹ ಎಂಬ ಪೇಸ್‌ಬುಕ್ ಪೇಜ್‌ನ ವ್ಯಕ್ತಿಯು, ಸಮುದಾಯಗಳ ನಡುವೆ ಕೋಮು ಸೌಹಾರ್ದತೆಗೆ ಧಕ್ಕೆಯನ್ನುವುಂಟು ಮಾಡುವ ರೀತಿಯಲ್ಲಿ ಕಮೆಂಟ್ ಹಾಕಿರುವುದಾಗಿದೆ ಎಂದು ದೂರುದಾರ ಬಂಟ್ವಾಳದ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನಂತೆ ಸೆ.18ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025 ಕಲಂ: 353(2) BNS 2023 ರಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


