ಪುತ್ತೂರು: ಚೂರಿ ಇರಿತ-ಇಬ್ಬರು ಆಸ್ಪತ್ರೆಗೆ ದಾಖಲು
ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಚೂರಿ ಇರಿತ ನಡೆದ ಘಟನೆ ಜೂ.13ರಂದು ಕೋರ್ಟ್ ರಸ್ತೆಯಲ್ಲಿ ನಡೆದಿದೆ.
ಗುಣಶೇಖರ್ ಶೆಟ್ಟಿ ಹಾಗೂ ಸದಾಶಿವ ಪೈ ಎಂಬವರ ಮಧ್ಯೆ ಈ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಚೂರಿ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಸದಾಶಿವ ಪೈ ಅವರ ಕೈ ಗೆ ಚೂರಿ ತಾಗಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುಣಶೇಖರ್ ಶೆಟ್ಟಿ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಪಾರ್ಕಿಂಗ್ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿಗುತ್ತಿದೆ.