ಪುತ್ತೂರು| ಯುವಕ-ಯುವತಿಗೆ ಕಿರುಕುಳ; ಇಬ್ಬರು ಪೊಲೀಸ್ ವಶಕ್ಕೆ
ಪುತ್ತೂರು: ಇಲ್ಲಿನ ಬಿರುಮಲೆ ಬೆಟ್ಟದ ಬಳಿ ಇಬ್ಬರು ಯುವಕ ಯುವತಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಬಂದು ಅವರಿಗೆ ಕಿರುಕುಳ ಕೊಟ್ಟು ನೀವು ಇಲ್ಲಿಂದ ಹೋಗಬೇಕು ಎಂದು ಹೇಳಿ ಕಳಿಸಿದ್ದಲ್ಲದೇ ನೀವು ಬ್ಯಾರಿಯಾ’ ಎಂದೆಲ್ಲಾ ಕೇಳಿ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದು ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಡಿಯೋ ಪರಿಶೀಲಿಸಿದಾಗ ಅದರಲ್ಲಿರುವ ಇಬ್ಬರು ಅಪ್ರಾಪ್ತರು ಮತ್ತು ಒಂದೇ ಧರ್ಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಡುಗನ ತಂದೆ ಪೊಲೀಸರಿಗೆ ದೂರು ನೀಡಿದ್ದು ಅದರ ಪ್ರಕಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಮಾಡಿ ಹರಿಯಬಿಟ್ಟಿರುವ ಕುದ್ಮಾರು ನಿವಾಸಿ ಪುರುಷೋತ್ತಮ ಮತ್ತು ಆರ್ಯಾಪು ನಿವಾಸಿ ರಾಮಚಂದ್ರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ.ಅರುಣ್ ಕೆ ಮಾಹಿತಿ ನೀಡಿದ್ದಾರೆ.