ಸುಳ್ಯ: ಕೆಸಿಎಫ್ ಬಹರೈನ್ ಸಮಿತಿ ಮುಖಂಡ ಬಶೀರ್ ಕಾರ್ಲೆ ನಿಧನ
ಸುಳ್ಯ ಗಾಂಧಿನಗರ ಜಮಾಅತ್ ನಿವಾಸಿ, ಪ್ರಸ್ತುತ ಬೊಳುಬೈಲು ಕುಂಬ್ರಚೊಡು ನಲ್ಲಿ ನೆಲೆಸಿರುವ ಕೆಸಿಎಫ್ ಬಹರೈನ್ ಸಮಿತಿ ಅಧ್ಯಕ್ಷರಾಗಿದ್ದ ಬಶೀರ್ ಕಾರ್ಲೆ(50. ವ) ಅವರು ಸೆ.1ರಂದು ನಿಧನರಾದರು.

ಸುನ್ನಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಶೀರ್ ಕಾರ್ಲೆ ಅವರು ಓರ್ವ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದರು. ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನ ಬಹರೈನ್ ಸಮಿತಿ ನಿರ್ದೇಶಕರಾಗಿದ್ದ ಅವರು ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ