ಕರಾವಳಿ

ಸುಳ್ಯ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವ ವೈದ್ಯ ನಿಧನ

ಸುಳ್ಯ : ಕಳೆದ ಕೆಲವು ದಿನಗಳ ಹಿಂದೆ ಸೋಣಂಗೇರಿಯಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿ ಸಂಪಾಜೆಯ ಯುವ ವೈದ್ಯ ನಿಧನರಾಗಿದ್ದಾರೆ.

ಡಾ.ಶಮಂತ್ ( 25 ವರ್ಷ) ದುಗ್ಗಲಡ್ಕದ ನಮ್ಮ ಕ್ಲೀನಿಕ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ದಿನ ಮನೆಯಿಂದ ಬೈಕ್ ನಲ್ಲಿ ಹೋಗಿ ಬರುತ್ತಿದ್ದ ಅವರು ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಸೋಣಂಗೇರಿ ಸಮೀಪ ಅಪಘಾತವಾಗಿತ್ತು. ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಸಮಯಗಳ ಚಿಕಿತ್ಸೆ ಬಳಿಕ ಗುರುವಾರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಫಲಿಸದೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!