ಅಬ್ದುಲ್ ರಹಿಮಾನ್ ಹತ್ಯೆಯ ಸೂತ್ರಧಾರಿಗಳ ಬಂಧನ ಆಗಬೇಕು-ರಿಯಾಝ್ ಕಡಂಬು
ಮಂಗಳೂರು: ಇತ್ತೀಚೆಗೆ ಕೊಳತ್ತಮಜಲ್ ನಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹೀಂ ಕೊಲೆಯನ್ನು ಖಂಡಿಸಿ ಮತ್ತು ಕುಡುಪು ಎಂಬಲ್ಲಿ ಗುಂಪು ಹಿಂಸೆಗೆ ಬಲಿಯಾದ ಅಶ್ರಫ್ ಎಂಬವರ ಹತ್ಯೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಜೂ.2ರಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಇತ್ತೀಚೆಗೆ ಕುಡುಪುವಿನಲ್ಲಿ ಗುಂಪು ಹತ್ಯೆಗೊಳಗಾದ ಅಶ್ರಫ್ ವಯನಾಡು, ಕೊಳತ್ತಮಜಲಿನಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಕುಟುಂಬ ಹಾಗೂ ಗಾಯಗೊಂಡ ಕಲಂದರ್ ಶಾಫಿ ಕುಟುಂಬಸ್ಥರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಅಬ್ದುಲ್ ರಹಿಮಾನ್ ಕೊಳತ್ತಮಜಲು ಸಹೋದರ ಹನೀಫ್ ಮತ್ತು ಗಾಯಗೊಂಡ ಶಾಫಿಯ ತಂದೆ ಅಬ್ದುಲ್ ಖಾದರ್ ಹಾಗೂ ಶಹೀದ್ ವಯನಾಡು ಅಶ್ರಫ್ ರ ಸಹೋದರ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ ಅಬ್ದುಲ್ ರಹಿಮಾನ್ ಹತ್ಯೆಯ ಸೂತ್ರಧಾರಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದರು. ನಮಗೆ ಇಲ್ಲಿ ಸಂವಿಧಾನವಿದೆ ನಾವು ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು. ನಮಗೆ ಭಯವಿಲ್ಲ ಎಂದು ಹೇಳುತ್ತಿದ್ದವರು ಮನೆಗೆ ಬೀಗ ಹಾಕಿ ಅಡಗಿ ಕೂತಿದ್ದೇಕೆ ಎಂದು ಆಕ್ರೋಶ ಹೊರಹಾಕಿದರು.
ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಮಾತನಾಡಿ ಸಂಘಪರಿವಾರದವರು ಇಲ್ಲಿನ ಶಾಂತಿ ಸುವ್ಯವಸ್ಥೆ ಹಾಳುಗೆಡವಿದ್ದು ಅವರ ವ್ಯಾಪಾರ ಬಹಿಷ್ಕಾರದ ಭಾಷಣಗಳು, ಪ್ರತಿಕಾರದ ಭಾಷಣಗಳು ಸಮಾಜವನ್ನು ಒಡೆದಿವೆ. ತನ್ನೊಂದಿಗೆ ಇದ್ದ ದೀಪಕ್ ಎಂಬಾತ ತನ್ನ ತಂದೆಗೆ ರಕ್ತದಾನ ಮಾಡಿದ್ದ ಅಬ್ದುಲ್ ರಹಿಮಾನ್ ಎಂಬವರನ್ನು ಕೊಂದಿದ್ದಾನೆ. ಇದಕ್ಕೆ ಕಾರಣಕರ್ತರಾದವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಶ್ ಆಲಿ ಮಾತನಾಡಿ ದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೃಷ್ಣಾಪುರ, ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಮಂಗಳೂರು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು
ಮತ್ತಿತರರು ಉಪಸ್ಥಿತರಿದ್ದರು