ಬಂಟ್ವಾಳ|ಕೊಲೆಯಾದ ವ್ಯಕ್ತಿಯ ಜೊತೆಗಿದ್ದ ಫೋಟೋ ದುರುಪಯೋಗಪಡಿಸಿ ವೈರಲ್: ಪ್ರಕರಣ ದಾಖಲು
ಬಂಟ್ವಾಳ: ಹತ್ಯೆಯಾದ ವ್ಯಕ್ತಿಯ ಜೊತೆ ನಿಂತು ವ್ಯಕ್ತಿಯೋರ್ವರು ತೆಗೆದಿರುವ ಫೋಟೋ ದುರುಪಯೋಗ ಪಡಿಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಕುರಿಯಾಳ ನಿವಾಸಿ ಧನುಷ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಇತ್ತೀಚೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ನಿಂತು ತೆಗೆದ ಪೊಟೋವನ್ನು, ಈ ಹಿಂದೆ ಅವರ ಇನ್ಸಾಗ್ರಾಮಿನಲ್ಲಿ ಫೋಸ್ಟ್ ಮಾಡಿದ್ದರು. ಅದೇ ಫೋಟೋವನ್ನು ದುರುಪಯೋಗಪಡಿಸಿಕೊಂಡು “ಟ್ರೋಲ್ ಅಬ್ರಹಾಂ” ಮತ್ತು “ಮೈಕಾಲ ಟ್ರೋಲ್” ಹಾಗೂ “ಕರಾವಳಿ ಒಫಿಸಿಯಲ್” ಎಂಬ ಇನ್ಸಾಗ್ರಾಮ್ ಪೇಜ್ ಗಳಲ್ಲಿ ಯಾರೋ ಕಿಡಿಗೇಡಿಗಳು ಕೋಮುದ್ವೇಷ ಭಾವನೆ ಉಂಟಾಗುವಂತಹ ಹಾಗೂ ಕೊಲೆ ಪ್ರಕರಣದ ಅಪರಾಧಿಯಂತೆ ಬಿಂಬಿಸಲಾಗುವ ಬರಹಗಳೊಂದಿಗೆ ಫೋಸ್ಟ್ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.