ದೆಹಲಿ ಚುನಾವಣೆ ಫಲಿತಾಂಶ: ಎಎಪಿ ಸೋಲಿನ ಬಗ್ಗೆ ಅರವಿಂದ ಕೇಜ್ರಿವಾಲ್ ಹೇಳಿದ್ದೇನು?
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕಾಗಿರುವ ಸೋಲನ್ನು ಒಪ್ಪಿಕೊಂಡಿದ್ದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಫಲಿತಾಂಶದ ಬಳಿಕ ಮೊದಲಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅತ್ಯಂತ ನಮ್ರತೆಯಿಂದ ಜನರ ಆದೇಶವನ್ನು ಸ್ವೀಕರಿಸುತ್ತೇವೆ. ಈ ಗೆಲುವಿಗೆ ಬಿಜೆಪಿಯನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಜನರ ಆದೇಶವನ್ನು ನಾವು ವಿನಮ್ರತೆಯಿಂದ ತಲೆಬಾಗಿ ಸ್ವೀಕರಿಸುತ್ತೇವೆ. ಜನಾದೇಶಕ್ಕಾಗಿ ಮತ್ತು ಈ ಗೆಲುವಿಗಾಗಿ ಬಿಜೆಪಿಯನ್ನು ಅಭಿನಂದಿಸುತ್ತೇನೆ. ಜನರು ಅನೇಕ ಭರವಸೆಗಳನ್ನು ಇಟ್ಟುಕೊಂಡು ಅವರಿಗೆ ಬಹುಮತ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಶಿಕ್ಷಣ ಆರೋಗ್ಯ ಕುಡಿಯುವ ನೀರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ದೆಹಲಿಯ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇದೀಗ ಜನ ಆದೇಶ ನೀಡಿದ್ದಾರೆ. ಸಮರ್ಥ ಪ್ರತಿಪಕ್ಷವಾಗಿ ನಾವು ಕಾರ್ಯನಿರ್ವಹಿಸಲಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.