ನಾವೂರು ಅಸ್ಸಯ್ಯದ್ ಅಲವಿ ತಂಙಳ್ ರವರ 25ನೇ ಆಂಡ್ ನೇರ್ಚೆ ಕಾರ್ಯಕ್ರಮದ ಪ್ರಚಾರ ಪತ್ರ ಬಿಡುಗಡೆ
ಸುಳ್ಯ ನಾವೂರು ಅಸ್ಸಯ್ಯದ್ ಅಲವಿ ತಂಙಳ್ (ವಲಿಯ ತಂಙಳ್) ರವರ 25 ನೇ ಆಂಡ್ ನೇರ್ಚೆ ಕಾರ್ಯಕ್ರಮ ಹಾಗೂ ಏಕ ದಿನ ಧಾರ್ಮಿಕ ಪ್ರಭಾಷಣ ಫೆ 16 ರಂದು ನಡೆಯಲಿದ್ದು ಇದರ ಪ್ರಚಾರ ಪತ್ರ ಬಿಡುಗಡೆ ಕಾರ್ಯಕ್ರಮ ನಾವೂರು ಮಖಾಂ ಪರಿಸರದಲ್ಲಿ ಇಂದು ನಡೆಯಿತು.

ಸಮಿತಿಯ ಗೌರವ ಅಧ್ಯಕ್ಷ ಅಸ್ಸಯ್ಯದ್ ಕುಂಞಿಕೋಯ ಸಅದಿ ತಂಙಳ್ ರವರು ಪ್ರಚಾರ ಪತ್ರವನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಆಂಡ್ ನೇರ್ಚೆ ಸ್ವಾಗತ ಸಮಿತಿಯ ಗೌರವ ಸಲಹೆ ಗಾರರಾದ ಅಸ್ಸಯ್ಯದ್ ಪೂಕೋಯ ತಂಙಳ್,ಚೇರ್ಮನ್ ಅಬ್ದುಲ್ಲಾ ಸಖಾಫಿ ಪಾರೆ ,ವೈಸ್ ಚೇರ್ಮನ್ ಅಬ್ದುಲ್ಲಾ ಹಾಜಿ ಜಯನಗರ, ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್, ಸಮಿತಿಯ ಕೋಶಾಧಿಕಾರಿ ಆಲಿ ನೂಮಾ, ಮೊದಲಾದವರು ಉಪಸ್ಥಿತರಿದ್ದರು.ಕನ್ವೀನರ್ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.