ವಾಟ್ಸಪ್ ಗೂ ಬಡಿದ ಗ್ರಹಣ..! ಸಂದೇಶಗಳಿಗೆ ಬ್ರೇಕ್
ಕೆಲವು ಗಂಟೆಗಳಿಂದ ವಾಟ್ಸಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಬಳಕೆದಾರರು ಗೊದಲಗೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ವಾಟ್ಸಪ್ ಡೌನ್ ಆಗಿದೆ.
ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಪ್ (WhatsApp) ವರ್ಕ್ ಆಗ್ತಾ ಇಲ್ವಾ? ಏನಿದು ವಾಟ್ಸಪ್ ಗೂ ತಟ್ಟಿತಾ ಸೂರ್ಯಗ್ರಹಣ. ಹೌದು ಎಲ್ಲರ ಮೊಬೈಲ್‌ನಲ್ಲಿರುವ (Mobile) ವಾಟ್ಸಪ್‌ನಲ್ಲಿ ಯಾವುದೇ ಮೆಸೇಜ್‌ಗಳು ಹೋಗ್ತಾ ಇಲ್ಲ, ಬರ್ತಾ ಇಲ್ಲ ಅಂತ ಗಾಬರಿಯಾಗಬೇಡಿ. ಸುಮಾರು 1 ಗಂಟೆಯಿಂದ ವಾಟ್ಸಪ್ ಸ್ಥಗಿತಗೊಂಡಿದ್ದು ಇದರಿಂದ ಯಾವುದೇ ಮೆಸೇಜ್‌ಗಳು (Messages) ಸೆಂಡ್ ಆಗ್ತಾ ಇಲ್ಲ. ಇದರಿಂದ ಬಳಕೆದಾರರು ಗೊಂದಲದಲ್ಲಿದ್ದಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು ಈ ಬಗ್ಗೆ ಇದುವರೆಗೆ ವಾಟ್ಸಪ್ ಯಾವುದೇ ರೀತಿಯಲ್ಲೂ ಮಾಹಿತಿಯನ್ನು ತಿಳಿಸಿಲ್ಲ.ಕೆಲವೇ ಗಂಟೆಗಳಲ್ಲಿ ಈ ಸಮಸ್ಯೆ ಬಗೆಹರಿಯಬಹುದು ಎಂದು ಹೇಳಲಾಗುತ್ತಿದೆ.