ಬೆಟ್ಟಂಪಾಡಿ: “ಸ್ಕ್ರಾಚ್ ವಿನ್’ ಲೈನ್ ಸೇಲ್..! ವಂಚನೆ ಅನುಮಾನದಲ್ಲಿ ಇಬ್ಬರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಪುತ್ತೂರು: ಛತ್ತೀಸ್‌ಗಢ ನೋಂದಣಿಯ ಕಾರೊಂದರಲ್ಲಿ ಅಪರಿಚಿತ ಇಬ್ಬರು ಬೆಟ್ಟಂಪಾಡಿ ಪರಿಸರದಲ್ಲಿ ಮನೆ ಮನೆಗೆ ಹೋಗಿ “ಸ್ಕ್ರಾಚ್ ವಿನ್’ ರೀತಿಯ ಲೈನ್‌ಸೇಲ್‌ನಲ್ಲಿ ತೊಡಗಿಸಿಕೊಂಡಿದ್ದು, ಇವರ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಬಾಲಾಜಿ ಮಾರ್ಕೆಟಿಂಗ್ ಸೇಲ್ಸ್ ಎಂದು ಕೂಪನ್ ಹೊಂದಿದ್ದು ಟಿವಿ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಮತ್ತು ಕೂಪನ್ ಕೊಟ್ಟು ಅದನ್ನು ಸ್ಕ್ರಾಚ್ ಮಾಡಿದ್ದಲ್ಲಿ ಅದರಲ್ಲಿ ಬಂದ ವಸ್ತುಗಳನ್ನು ಕೊಡುವುದಾಗಿ ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಬೆಟ್ಟಂಪಾಡಿ ಪಂಚಾಯತ್‌ಗೆ ವಿಷಯ ತಿಳಿಸಿ ಅಲ್ಲಿಗೆ ಕರೆತಂದಿದ್ದರು. ಬಳಿಕ ಪೊಲೀಸರು ಪುತ್ತೂರು ಗ್ರಾಮಾಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇವರ ಮಾರ್ಕೆಂಟಿಂಗ್ ಕಚೇರಿ ಕೊಲ್ಹಾಪುರ ಗಾಂಧಿನಗರ ಎಂದಿದ್ದು, ಮಂಗಳೂರು ಸಹಿತ 10 ಕಡೆ ಶಾಖೆ ಹೊಂದಿರುವುದಾಗಿ ನಮೂದಿಸಲಾಗಿದೆ.