ವಿಟ್ಲ: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಉದ್ಯಮಿ
ವಿಟ್ಲ: ಉದ್ಯಮಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.7ರಂದು ನಡೆದಿದೆ.
ವಿಟ್ಲದ ಓಂ ಸಾಯಿ ಇಂಡಸ್ಟ್ರೀಸ್ ಮಾಲಕ, ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.