ಕರಾವಳಿರಾಜಕೀಯ

ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಪ್ರಭುದ್ದತೆಯ ಮಾತುಗಳನ್ನಾಡಬೇಕು: ಕೆ ಪಿ ಆಳ್ವ


ಪುತ್ತೂರು: ಸಮಾಜದಲ್ಲಿ ರಾಜಕೀಯ ಮತ್ತು ಸಾಂವಿಧಾನಿಕ ಸ್ಥಾನದಲ್ಲಿರುವವರು ಪ್ರಭುದ್ದತೆಯ‌ನಾತುಗಳನ್ನಾಡಬೇಕೇ ವಿನ ಜನತೆಯನ್ನು ಕೆರಳಿಸುವ ಅಥವಾ ಸಮಾಜದಲ್ಲಿ ಅಶಾಂತಿ‌ ಮೂಡಿಸುವ ಹೇಳಿಕೆ ನೀಡಬಾರದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಅದ್ದು ಪಡೀಲ್ ಎಂಬವರು ಸಾಮಾಜಿಕ ತಾಣದಲ್ಲಿ ಅವಹೇಳನಕಾರಿಯಾಗಿ ಮೆಸೇಜ್ ರವಾನೆ ಮಾಡಿದ್ದಾರೆಂದು ಅವರ ಮೇಲೆ ಪ್ರಕರಣ ದಾಖಲಾಗಿದೆ, ಅದ್ದು ಅವರು ಮಾಡಿರುವ ಕೃತ್ಯವನ್ನು ಯಾವೊಬ್ಬ ಕಾಂಗ್ರೆಸ್ ನಾಯಕರಾಗಲಿ, ಕಾರ್ಯರ್ತರಾಗಲಿ‌ ಸಮರ್ಥನೆ ಮಾಡದೆ ಕಾನೂನಿಗೆ ಗೌರವ ಕೊಡುವ ಕೆಲಸವನ್ನು‌ ಮಾಡಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟು ವಿಧಾನಪರಿಷತ್ ಸದಸ್ಯರಾದ ಕಿಶೋರ್ ಬೊಟ್ಯಾಡಿಯವರು ಹೊಡಿಬಡಿ ಸಂಸ್ಕೃತಿಯ ಹೇಳಿಕೆ ನೀಡಿರುವುದು ಸರಿಯಲ್ಲ, ಅದನ್ನು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಕಿಶೋರ್ ಅವರು ರಾಜಕೀಯದಲ್ಲಿ ಇನ್ನೂ ಶಿಶುವಿನಂತೆ ವರ್ತಿಸಿದ್ದಾರೆ. ಹಿಂದೆ ಅವರು ಕೊಡುವ ಹೇಳಿಕೆಗೂ ಈಗ ಕೊಡುವ ಹೇಳಿಕೆಗೂ ವ್ಯತ್ಯಾಸ ಇರುತ್ತದೆ. ಓರ್ವ ವಿಧಾನಪರಿಷತ್ ಸದಸ್ಯರಾದವರು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಅಶಾಂತಿಗೆ ಪ್ರೇರಣೆ ಕೊಡುವ ರೀತಿಯಲ್ಲಿ ಹೇಳಿಕೆ ನೀಡಿರುವುದನ್ನು ಯಾವ ಸಮಾಜವು ಸ್ವೀಕರಿಸುವುದಿಲ್ಲ ಮತ್ತು ಸಮಾಜ ಹೊಡಿ ಬಡಿ ಸಂಸ್ಕಾರವನ್ನು ಒಪ್ಪುವುದಿಲ್ಲ ಎಂಬುದನ್ನು ಕಿಶೋರ್ ಬೊಡ್ಯಾಡಿ ತಿಳಿದುಕೊಳ್ಳಬೇಕು ಮತ್ತು ಸಾರ್ವಜನಿಕ ಹೇಳಿಕೆ ಕೊಡುವಾಗ ಪ್ರಬುದ್ದತೆಯನ್ನು ಮೆರೆಯಬೇಕು, ಜನ‌ ಎಲ್ಲವನ್ನೂ‌ ಗಮನಿಸುತ್ತಾರೆ ಎಂದು ಆಳ್ವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!