ಕೆಯ್ಯೂರು: ಸಿಡಿಲು ಬಡಿದು ವ್ಯಕ್ತಿ ಮೃತ್ಯು
ಪುತ್ತೂರು: ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ಅವಿವಾಹಿತ ನಾರಾಯಣ(45ವ) ರವರು ಸಿಡಿಲು ಬಡಿದು ಮೃತಪಟ್ಟ ಘಟನೆ ಡಿ.2ರಂದು ಸಂಜೆ ನಡೆದಿದೆ.
ನಾರಾಯಣ ಅವರು ಮನೆಯಂಗಳದಲ್ಲಿ ವಿದ್ಯುತ್ ವಯರ್‌ನ ಸಮೀಪವಿದ್ದಾಗ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಕರೆ ತಂದರಾದರೂ ಆಗಲೇ ಅವರು ಮೃತಪಟ್ಟಿದ್ದರು.