ಸುಳ್ಯ: ಅನ್ಸಾರಿಯಾ ಆಡಿಟೋರಿಯಂ ಉದ್ಘಾಟನಾ ಅಂಗವಾಗಿ ದಿ.ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ಸ್ಮರಣಾರ್ಥ ತಂಪು ಪಾನಿಯ ವಿತರಣೆ
ಸುಳ್ಯ: ದಿ.ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ರವರ ಸ್ಮರಣಾರ್ಥ ಸುಳ್ಯ ಅನ್ಸಾರಿಯಾ ಆಡಿಟೋರಿಯಂ ಉದ್ಘಾಟನಾ ಅಂಗವಾಗಿ ಕಾರ್ಯಕ್ರಮಕ್ಕೆ ಬರುವ ಹಾಗೂ ಸಾರ್ವಜನಿಕರಿಗೆ ಉಚಿತ ತಂಪು ಪಾನಿಯ ವಿತರಣೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಯಿತು.
ಅಬ್ಬಾಸ್ ಹಾಜಿರವರ ಪುತ್ರ ನಾಸಿರ್ ಕಟ್ಟೆಕ್ಕಾರ್ಸ್ ನೇತೃತ್ವ ದಲ್ಲಿ ನ.29 ರಂದು ನಾವೂರು ಜಂಕ್ಷನ್ ಬಳಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ದಿ.ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ರವರು ಅನ್ಸಾರಿಯಾ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಪದಾಧಿಕಾರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸಾಮಾಜಿಕವಾಗಿ ಸುಳ್ಯ ಮತ್ತು ಜಿಲ್ಲೆಯಲ್ಲಿ ಗುರುತಿಸಿಕ್ಕೊಂಡಿದ್ದ ಇವರು ವಿಧಿವಶರಾಗಿ 5 ವರ್ಷ ಕಳೆದಿದ್ದು ಇವರ ನೆನಪಿಗಾಗಿ ಅವರ ಪುತ್ರರು ಈ ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡರು.