ಕಡಬ ಠಾಣೆಯ ಸಮೀಪವೇ ದ್ವೇಷ ಭಾಷಣ! ನವೀನ್ ನೆರಿಯ ವಿರುದ್ದ ಪ್ರಕರಣ ದಾಖಲು
ಕಡಬ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ಜೂ.4ರಂದು ಸಂಜೆ ಸಂಘಟನೆಗಳ ಪ್ರಮುಖರುಗಳು, ಕಡಬ ಪೊಲೀಸ್ ಠಾಣೆಯ ಬಳಿ ಕಡಬ – ಸುಬ್ರಹ್ಮಣ್ಯ ರಸ್ತೆಯಿಂದ ಕಡಬ ಪೊಲೀಸ್ ಠಾಣೆಗೆ ಬರುವ ರಸ್ತೆಯಲ್ಲಿ ನಿಂತು ಪ್ರತಿಭಟಿಸಿದ್ದು ಈ ವೇಳೆ ನವೀನ್ ನೆರಿಯ, ಪೊಲೀಸರನ್ನುದ್ದೇಶಿಸಿ ದ್ವೇಷದ ಭಾಷಣವನ್ನು ಮಾಡಿದ್ದು ತನ್ನ ಭಾಷಣದ ವೇಳೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನುದ್ದೇಶಿಸಿ ಪ್ರಚೋದನಕಾರಿ ಮಾತನಾಡಿದ್ದು ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಅವರ ವಿರುದ್ದ ಜೂ.4ರಂದು ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.