ಅಮ್ಮಾ…ನಿನಗೆ ಸರಿಸಾಟಿ ಯಾರಮ್ಮಾ…
ಹೌದು… ಇವರು ಅಮ್ಮನ ಮಾತನ್ನು ಮೀರುವವರಲ್ಲ, ಅಮ್ಮನೇ ಇವರಿಗೆ ಜೀವ.. ಇಂದಿಗೂ ಅಮ್ಮನೇ ಕೊಟ್ಟ ಬುತ್ತಿಯೂಟವೇ ಬೇಕು..ಯಾವುದೇ ಊರಿಗೆ ಹೋಗಲಿ ಬಂದು ಸೇರುವುದು ಅಮ್ಮನಲ್ಲಿಗೆ… ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೆ ನಾಲ್ಕೈದು ಬಾರಿ ಅಮ್ಮನಿಗೆ ಫೋನ್ ಕರೆ.. ಅಮ್ಮಾ ಉಂಡರಾ? ಯಾನ್ ಬಯ್ಯಗ್ ಬರ್ಪೆ.. ವನಸ್ ಮಲ್ತ್‌ದ್ ಜೆಪ್ಪುಲೆ(ಅಮ್ಮಾ ಊಟ ಮಾಡಿದ್ದೀರಾ, ನಾನು ಸಂಜೆ ಬರ್ತೇನೆ, ಊಟ ಮಾಡಿ ಮಲಗಿ) ಇದು ಪುತ್ತೂರು ಶಾಸಕರಾದ ಅಶೋಕ್ ರೈ ಅವರ ದಿನಚರಿ. ಇವರ ದಿನಚರಿ ಆರಂಭವಾಗುವುದೇ ಅಮ್ಮನ ಮೂಲಕ. ಬೆಳಿಗ್ಗೆ ಎದ್ದು ಅಮ್ಮನ ಬಳಿಗೇ ತೆರಳುವುದು.. ಈಗಲೂ ಸಣ್ಣ ಮಗುವಿನ ಥರ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗುತ್ತಾರೆಂದರೆ ನೀವು ನಂಬುತ್ತೀರಾ? ನೀವು ನಂಬಲೇ ಬೇಕು.. ಈ ರೀತಿ ಅಮ್ಮನ ಸೇವೆ ಮಾಡಲು ಭಾಗ್ಯ ಎಲ್ಲರಿಗೂ ಸಿಗಲ್ಲ.
ಸಮಾಜದಲ್ಲಿರುವ ಎಷ್ಟೋ ಆಶ್ರಮಗಳು ಅಮ್ಮಂದಿರಿಗಾಗಿ ನಿರ್ಮಾಣವಾಗಿದೆ, ಅಮ್ಮನಿಗೆ ಪ್ರಾಯವಾದಾಗ ಅಥವಾ ನಡೆದಾಡಲು ಇನ್ನು ಕಷ್ಟ ಸಾಧ್ಯ ಎಂದಾಗ ಅವರನ್ನು ಆಶ್ರಮಕ್ಕೆ ಸೇರಿಸಿ ನಿಟ್ಟುಸಿರು ಬಿಡುವ ಆಧುನಿಕ ಯುಗದ ಮಕ್ಕಳ ನಡುವೆ ಓರ್ವ ತಾಯಿ ತನ್ನ ಮಗನ ಆರೈಕೆಯಲ್ಲೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಮೇಲಿನ ಚಿತ್ರ ಶಾಸಕರ ಮನೆಯಲ್ಲಿ ತೆಗೆದ ಚಿತ್ರ. ಮಗನ ಕೂದಲು ಕತ್ತರಿಸುತ್ತಿರುವ ಅಮ್ಮ. ತನ್ನ ಮಗ ಚೆನ್ನಾಗಿರಬೇಕು, ಚೆನ್ನಾಗಿ ಕಾಣಬೇಕು, ನಾಲ್ಕು ಜನರ ಮಧ್ಯೆ ಬಾಳಿ ಬದುಕುವ ಮಗ ಎಂದೆಂದೂ ಹೀಗೇ ಇರಬೇಕು ಎಂಬ ಆಶೀರ್ವಾದದ ಸಹೃದಯಿ ಮನಸ್ಸಿನಿಂದ ತಾಯಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೋ ಎಂದು ಬಾಸವಾಗುವಂತೆ ತಾಯಿ ಮಗನ ಕೂದಲು ಕತ್ತರಿಸುತ್ತಿದ್ದಾರೆ… ಮಗ ಅಮ್ಮನ ಕೆಲಸಕ್ಕೆ ತಲೆ ಬಾಗಿ ನಿಂತಿದ್ದಾರೆ.. ಪುಟ್ಟ ಮಗುವಿನಂತೆ… ಊರಿಗೆ ಅರಸನಾದರೂ ತಾಯಿಗೆ ಮಗನಲ್ಲವೇ ಎಂಬ ಮಾತು ಎಷ್ಟು ಸ್ಪಷ್ಟವಾಗಿದೆ ಎಂಬುದು ಶಾಸಕ ಅಶೋಕ್ ರೈ ಮತ್ತು ಅವರ ತಾಯಿಯ ಬಾಂಧವ್ಯದಿಂದ ತಿಳಿಯುತ್ತದೆ. ಅಮ್ಮ ಎಂದರೆ ದೇವರು, ಅಮ್ಮ ಎಂದರೆ ಸ್ವರ್ಗ, ಅಮ್ಮ ಮನೆಯಲ್ಲಿದ್ದರೆ ಆ ಮನೆಯೇ ಒಂದು ದೇವಾಲಯವಿದ್ದಂತೆ… ಅಲ್ಲಿ ಅಮ್ಮನೇ ದೇವರಾಗಿಬಿಡುತ್ತಾರೆ… ಗರ್ಭ ಗುಡಿಯಲ್ಲಿರುವ ದೇವರು, ಗರ್ಭ ಹೊತ್ತ ದೇವರು ಎರಡೂ ಸಮಾನರಲ್ಲವೇ… ತಾಯಿ ಆಶೀರ್ವಾದವಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಪುರಾಣ ಕಥೆಗಳೇ ಸಾಕ್ಷಿ ಹೇಳುತ್ತದೆ… ನಮ್ಮ ಅಮ್ಮನನ್ನೂ ಇದೇ ರೀತಿ ನಾವೂ ಪ್ರೀತಿಸೋಣ…