ಕರಾವಳಿ

ಪಾಟ್ರಕೋಡಿ ಪ್ರಾಥಮಿಕ ಶಾಲೆಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಬೀಬ್ ಬಾಯಬೆ, ಪ್ರ.ಕಾರ್ಯದರ್ಶಿಯಾಗಿ ಖಲಂದರ್ ಕೆ.ಪಿ. ಆಯ್ಕೆ



ಪುತ್ತೂರು: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿ ಇಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.


ಶಾಲಾಭಿವೃದಿ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಟಿ ರವರ ಅಧ್ಯಕ್ಷತೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘ ರಚನಾ ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯರಾದ ಕರ್ನಾಟಕ ರಾಜ್ಯ NSUI ಉಪಾಧ್ಯಕ್ಷರಾದ ಫಾರೂಖ್ ಬಾಯಬೆ, SDMC ಮಾಜಿ ಅಧ್ಯಕ್ಷರಾದ ಜಬ್ಬಾರ್ ಪಾಟ್ರಕೋಡಿರವರು ಭಾಗವಹಿಸಿದ್ದರು.


2024-25 ನೆ ಸಾಲಿನ ನೂತನ ಸಮಿತಿಗೆ ಈ ಕೆಳಗಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು
ಗೌರವ ಅಧ್ಯಕ್ಷ ಫಾರೂಖ್ ಬಾಯಬೆ
ಅಧ್ಯಕ್ಷ: ಹಬೀಬ್ ಬಾಯಬೆ, ಉಪಾಧ್ಯಕ್ಷ ಮಜೀದ್ ಕೋಡಿ, ಪ್ರಧಾನ ಕಾರ್ಯದರ್ಶಿ: ಖಲಂದರ್ ಕೆ.ಪಿ.,ಕಾರ್ಯದರ್ಶಿ: ಇಸ್ಮಾಯಿಲ್ ಕುಕ್ಕರಬೆಟ್ಟು, ಹಾಗು ನೌಶಾದ್ ಕೋಡಿ, ಕೋಶಾಧಿಕಾರಿ- ಅರ್ಷದ್ ಕೋಡಿ, ಕ್ರೀಡಾ ಉಸ್ತುವಾರಿ: ಸಾದಿಕ್ ಮಿತ್ತಪಡ್ಪು,
ಸಲಹಾ ಸಮಿತಿ ಸದಸ್ಯರಾಗಿ :- ಹನೀಫ್, ತಸ್ರೀಫ್ ಟಿ. ಸಾಜೀದ್, ಹಾಗು ಹಮೀದ್ ಎಮ್ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯರಾದ ಉಮರಾಗಿ ಶರಣಪ್ಪರವರು ಸ್ವಾಗತಿಸಿದರು, ಶಿಕ್ಷಕ ಗುರುರಾಜ್  ವಂದಿಸಿದರು.

Leave a Reply

Your email address will not be published. Required fields are marked *

error: Content is protected !!