ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಬೀರ್ನಹಿತ್ಲು ಸ.ಹಿ.ಪ್ರಾ ಶಾಲೆಯಲ್ಲಿ “ನಾವು ಮನುಜರು” ಕಾರ್ಯಕ್ರಮ
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸ.ಹಿ.ಪ್ರಾ ಶಾಲೆಯಲ್ಲಿ “ನಾವು ಮನುಜರು ಕಾರ್ಯಕ್ರಮ ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ನಡೆಯಿತು
![](https://newsbites.in/wp-content/uploads/2024/08/img-20240825-wa00741459048890906676088-1024x472.jpg)
ಅದ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಸ್ವಚ್ಚತೆ, ಸಮಾನತೆ ಮತ್ತು ದಿನದ ದಿನಚರಿಯಲ್ಲಿ ಮನುಜರಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರದ ಪ್ರ ಕಾರ್ಯದರ್ಶಿ ಸುಮಂಗಲಾ ಶೆಣೈಯವರು ಮಾತನಾಡಿ ಮನುಷ್ಯತ್ವದಲ್ಲಿ ಮನೆ ಮತ್ತು ಮನಸ್ಸು ಹೇಗಿರಬೇಕು, ಶಾಲೆ ಮತ್ತು ಅದ್ಯಾಪಕರ ಮದ್ಯೆ ವಿದ್ಯಾರ್ಥಿಗಳ ಪಾತ್ರದಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ವಿವರಿಸಿದರು.ವಿದ್ಯಾರ್ಥಿಗಳಿಗೆ ರಸಪ್ರಶ್ನೆ ನೀಡಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ಪುಷ್ಪಾವತಿ ಮತ್ತು
ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.