ಕರಾವಳಿ

ರಾಜ್ಯದ ಜನತೆ ಸಿದ್ದರಾಮಯ್ಯರ ಜೊತೆಗಿದ್ದಾರೆ, ನಾವು 136 ಶಾಸಕರು ಒಗ್ಗಟ್ಟಾಗಿ ಅವರೊಂದಿಗಿದ್ದೇವೆ: ಅಶೋಕ್ ರೈ

ಪುತ್ತೂರು:ಪುತ್ತೂರು ಬ್ಲಾಕ್‌ ಮತ್ತು ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ಸಿ ಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್ ತನಿಖೆಗೆ ಅನುಮತಿ‌ ನೀಡಿದ ರಾಜ್ಯಪಾಲರ ವಿರುದ್ಧ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅಶೋಕ್‌ ರೈ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.ಗವರ್ನರ್‌ ಏಜೆಂಟ್‌ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು. ಬಡವರ ಕಷ್ಟ ಅರಿತಿರುವ ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು, ಅವರನ್ನು ಯಾರಿಗೂ ಏನೂ ಮಾಡಲು ಆಗುವುದಿಲ್ಲ, ಇಡೀ ರಾಜ್ಯದ ಜನತೆ ಅವರೊಂದಿಗಿದ್ದಾರೆ. ನಾವು 136 ಶಾಸಕರು ಒಂದಾಗಿ ಸಿದ್ದರಾಮಯ್ಯರನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಸ್ವತಂತ್ರ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದ್ದು ದ್ವೇಷ ರಾಜಕಾರಣ ಮಾಡುತ್ತಿದೆ. ನನ್ನ ಹಾಗೂ ನನ್ನ ಮೇಲೆ ಹಿಂದೆ ಐಟಿ ದಾಳಿ ನಡೆಸಿದ್ರು, ಆದ್ರೆ ಅವರಿಗೆ ಏನೂ ಸಿಕ್ಕಿಲ್ಲ ಎಂದ ಅವರು ಸಿದ್ದರಾಮಯ್ಯ ಅವರ ವಿರುದ್ಧದ ಎಲ್ಲ ಆರೋಪಗಳು ಸುಳ್ಳು, ಇದು ಬಿಜೆಪಿ ಸೃಷ್ಟಿಸಿದ ಸುಳ್ಳಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲೇ ಇದ್ದು ಆತ ಏನಾದರೂ ಸ್ವ ಪಕ್ಷದ ವಿರುದ್ಧವೇ ಮಾತನಾಡಿದಾರೆ ಅವನನ್ನೆ ಬಂಧಿಸುವ ಕೆಲಸ ಮಾಡುತ್ತಾರೆ. ಇದು ಅವರಿಗೆ ಅಳಿಗಾಲ.  ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್‌ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!