ಸುಳ್ಯ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಲ್ ವೆಂಕಟೇಶ್
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸುಳ್ಯ ಅಭ್ಯರ್ಥಿಯಾಗಿ ಎಚ್ ಎಲ್ ವೆಂಕಟೇಶ್ ರವರ ಹೆಸರನ್ನು ಇಂದಿನ ಸಭೆಯಲ್ಲಿ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಅಭ್ಯರ್ಥಿ ತನ ಬಯಸಿ ಸುಬ್ರಹ್ಮಣ್ಯದ ಅಗ್ರಹಾರ ದುಗ್ಗಪ್ಪ, ಸುಳ್ಯ ಜಟ್ಟಿಪಳ್ಳದ ಎಚ್.ಎಲ್.ವೆಂಕಟೇಶ್,ಸುಳ್ಯ ಜಯನಗ ನಿವಾಸಿ ಚೋಮ ಎನ್.ಬಿ. ಹಾಗೂ ಏನೆಕಲ್ ನ ಚಂದ್ರಶೇಖರರು ಸುಳ್ಯ ಹಾಗೂ ಕಡಬ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿಯವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆದು ಚರ್ಚಿಸಿ ಬಳಿಕ ಈ ಬಾರಿಯ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಿವೃತ್ತ ಉಪನ್ಯಾಸಕ ಎಚ್.ಎಲ್ ವೆಂಕಟೇಶರ ಹೆಸರು ಅಂತಿಮಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಜೆಡಿಎಸ್ ಜಿಲ್ಲಾಧ್ತಕ್ಷ ಜಾಕೆ ಮಾಧವ ಗೌಡ, ಕಡಬ ತಾಲೂಕು ಅಧ್ಯಕ್ಷ ಮೀರಾ ಸಾಹೇಬ್, ಸುಳ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕಡಬ ತಾಲೂಕು ಯುವಜನತಾದಳ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ,ಸುಳ್ಯ ತಾಲೂಕು ಯುವ ಜನತಾದಳ ಅಧ್ಯಕ್ಷ ಮೋಹನ್ ಚಾಂತಾಳ,ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿ ಡಾ.ತಿಲಕ್,ಉಪಾಧ್ಯಕ್ಷ ದಿನೇಶ್ ಮಾಸ್ತರ್ ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿ ಇ.ಜಿ. ಜೋಸೆಫ್,ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎ.ಬಿ. ಮೊಯ್ದೀನ್, ರಫೀಕ್ ಐವತ್ತೊಕ್ಲು, ಹಸೈನಾರ್ ಅಜ್ಜಾವರ, ಶಾಹೀರ್ ಕಳಂಜ, ರಾಜ್ಯಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಹುಕ್ರ ಕುತ್ತಮೊಟ್ಟೆ, ಸುಳ್ಯ ತಾಲೂಕು ಘಟಕದ ಕೋಶಾಧಿಕಾರಿ ಸುರೇಶ್ ನಡ್ಕ, ಮಾಜಿ ಅಧ್ಯಕ್ಷ ದಯಾಕರ ಆಳ್ವ ಹಾಜರಿದ್ದು, ಸಲಹೆ ಸೂಚನೆ ನೀಡಿದರು.