ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿದ್ದರೆ ದೇಶದ ಭದ್ರತೆಗೆ ಅಪಾಯ ಇದೆ: ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಶೋಕ್ ರೈ
ಪುತ್ತೂರು: ನಮ್ಮ ದೇಶದ ಭೂಮಿಯನ್ನು ಚೀನಾ ಅತಿಕ್ರಮಿಸುತ್ತಲೇ ಇದೆ, ಹಲವಾರು ಚ.ಅಡಿ ಜಾಗವನ್ನು ಸದ್ದಿಲ್ಲದೆ ಒಳಗೆ ಹಾಕಿದ್ದಾರೆ ಆದರೆ ನಾವು ಇಲ್ಲಿ ಧರ್ಮಗಳ ವಿಚಾರದಲ್ಲಿ ಕಚ್ಚಾಡುವ ಕೆಲಸವನ್ನು ಮಾಡುತ್ತಿದ್ದು ಇದೇ ರೀತಿ ಮುಂದುವರೆದಲ್ಲಿ ದೇಶದ ಭದ್ರತೆಗೆ ಅಪಾಯ ಉಂಟಾಗಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ದೇಶದಲ್ಲಿ ನಾವು ಪರಸ್ಪರ ಒಗ್ಗಟ್ಟಿನಿಂದ ಇರಬೇಕಿದೆ. ಧರ್ಮದ ಹೆಸರಿನಲ್ಲಿಮಾಡುವ ಕಚ್ಚಾಟವನ್ನು ನಿಲ್ಲಿಸಬೇಕು, ಯುವ ಜನತೆಯ ಕೈಗೆ ಉದ್ಯೋಗ ಕೊಡುವ ಕೆಲಸವನ್ನು ಮಾಡಬೇಕಿದೆ. ಕಳೆದ ಹತ್ತು ವರ್ಷದಲ್ಲಿ ದೇಶ ಎತ್ತ ಸಾಗಿದೆ, ಇಲ್ಲಿ ಏನು ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಪ್ರತೀಯೊಬ್ಬ ನಾಗರಿಕನಿಗೂ ಗೊತ್ತಿದೆ. ದೇಶದ ಭದ್ರತೆಯ ವಿಚಾರದಲ್ಲಿ ನಾವು ಎಡವಿದ್ದೇವೆ, ತಮಗಾಗದವರ ಮೇಲೆ ದಾಳಿ ನಡೆಸುವ ಮೂಲಕ ದ್ವೇಷ ಸಾಧಿಸುತ್ತಾ ಹೋದರೆ ದೇಶದಮುಂದಿನ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಜನ ಅರಿತುಕೊಳ್ಳಬೇಕು ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ,ಕೆಪಿಸಿಸಿ ಕಾರ್ಯದರ್ಶಿ ಎಂಎಸ್ ಮಹಮ್ಮದ್,ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ,ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ವಿಟ್ಲ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು,ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್,ಉಸ್ತುವಾರಿ ಉಲ್ಲಾಸ್ ಕೋಟ್ಯಾನ್, ಡಿಸಿಸಿ ಕಾರ್ಯದರ್ಶಿ ನಝೀರ್ ಮಠ, ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು