ಕಡಬ: ದನದ ಮೇಲೆ ಆನೆ ದಾಳಿ..? ಭೀತಿಯಲ್ಲಿ ಸ್ಥಳೀಯರು
ಕಡಬ ತಾಲೂಕಿನ ಕೊಣಾಜೆಯ ಸಿ.ಆರ್.ಸಿ. ತಮಿಳು ಕಾಲೋನಿ ಬಳಿ ದನವೊಂದು ರಾತ್ರಿ ವೇಳೆ ತೋಟದಲ್ಲಿ ಮೃತಪಟ್ಟಿದ್ದು, ಆನೆ ದಾಳಿ ನಡೆಸಿರುವ ಬಗ್ಗೆ ಬಲವಾದ ಸಂಶಯ ವ್ಯಕ್ತವಾಗಿದೆ.
ಕೊಣಾಜೆ ದೊಡ್ಡಮನೆಯ ಅಶೋಕ ಎಂಬವರಿಗೆ ಸೇರಿದ ದನವನ್ನು ಮೇಯಲು ಬಿಟ್ಟಿದ್ದು, ಸಂಜೆ ಮನೆಯವರು ಹುಡುಕಾಡಿದಾಗ ದನ ಸಿಕ್ಕಿರಲಿಲ್ಲ.
ಮರುದಿನ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ದನ ತೋಟದಲ್ಲಿ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬoದಿದೆ. ತೋಟದಲ್ಲಿ ನೀರಾವರಿ ಪೈಪ್ ಗಳು ಹಾನಿಯಾಗಿದ್ದು, ರಾತ್ರಿ ವೇಳೆ ಆನೆ ಬಂದಿರುವ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಆನೆ ದಾಳಿಯ ಸುದ್ದಿ ಕೇಳಿ ಸ್ಥಳೀಯ ಜನತೆ ಭಯಭೀತಗೊಂಡಿದ್ದಾರೆ ಎಂದು ತಿಳಿದುಬಂದಿದೆ.