ಸುಳ್ಯದಲ್ಲಿ ಕರ್ನಾಟಕ ಅಶ್ರಫ್ ಒಕ್ಕೂಟದ ಪ್ರಥಮ ಸಭೆ;
ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ರಫ್ ಕುಂಜಿಲರವರಿಗೆ ಧನಸಹಾಯ
ಅಶ್ರಫ್ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿಯ ಪ್ರಥಮ ಸಭೆಯು ಡಿ.5 ರಂದು ಸುಳ್ಯದ ಕಾನತ್ತಿಲ ಸಭಾಂಗಣದಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷ ಅಶ್ರಫ್ ಕಲ್ಲೇಗ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಸ್ತರ್ ಪುತ್ತೂರು ಸ್ವಾಗತಿಸಿ ಅಶ್ರಪ್ ಮಾದಪುರ ವರಧಿ ವಾಚಿಸಿದರು.
ಸಭೆಯಲ್ಲಿ ಬೈಲಾ ರಚನೆ ಬಗ್ಗೆ, ನೋಂದಣಿ ಮತ್ತು ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ನ್ಯಾಯವಾದಿ ಅಶ್ರಫ್ ಅಗ್ನಾಡಿ ಉಪ್ಪಿನಂಗಡಿಯವರು ಸಲಹೆ ಸೂಚನೆಯನ್ನು ನೀಡಿದರು. ಸಭೆಯಲ್ಲಿ ಕೋಶಾಧಿಕಾರಿ ಅಶ್ರಫ್ ಎಂ.ಹೆಚ್. ಸೋಮವಾರಪೇಟೆ, ಉಪಾಧ್ಯಕ್ಷ ಅಶ್ರಫ್ ಸೋಮವಾರಪೇಟೆ ಅಶ್ರಫ್ ಗುಂಡಿ ಅರಂತೋಡು, ಅಶ್ರಫ್ ಕಲ್ಲುಗುಂಡಿ, ಅಶ್ರಫ್ ಪರ್ತಿಪಾಡಿ, ಅಶ್ರಫ್ ಅಳಿಕೆಮಜಲು, ಅಶ್ರಪ್ ಅಡ್ಕ ಮೊದಲಾದವರು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ರಫ್ ಕುಂಜಿಲ ಕೊಡಗು ಇವರಿಗೆ ಸಮಿತಿ ವತಿಯಿಂದ ಸಂಗ್ರಹಿಸಲಾದ ರೂ 18,500 ಮೊತ್ತವನ್ನು ಹಸ್ತಾಂತರಿಸಿದರು.