ಕರಾವಳಿ

ಕರಾವಳಿ

ಸುಳ್ಯ :ಆದಿದ್ರಾವಿಡ ಸಮ್ಮಿಲನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಆದಿದ್ರಾವಿಡ ಯುವ ವೇದಿಕೆ(ರಿ) ದ. ಕ ಹಾಗೂ ಸುಳ್ಯ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಸಮಿತಿ ಮತ್ತು ಗ್ರಾಮ ಘಟಕ ಸಮಿತಿಗಳ ನೇತೃತ್ವದಲ್ಲಿ ಆದಿದ್ರಾವಿಡ ಸಮ್ಮಿಲನ

Read More
ಕರಾವಳಿ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

ಪುತ್ತೂರು: ತಾಲೂಕಿನಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬ್ರೈಟ್ ಭಾರತ್ ಸಂಸ್ಥೆಯು ಹೊಸ ಪ್ರಾಜೆಕ್ಟ್ ಅನ್ನು ಜನತೆಗೆ ಪರಿಚಯಿಸಿದ್ದು ಈಗಾಗಲೇ ಜನರು ಇದನ್ನು ಅದ್ದೂರಿಯಾಗಿ ಸ್ವೀಕರಿಸಿದ್ದು 15 ದಿನದಲ್ಲಿ ಬರೋಬ್ಬರಿ

Read More
ಕರಾವಳಿ

ಪುತ್ತೂರು: ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಜಾಗೃತಿ ಕಾರ್ಯಕ್ರಮ ನಡೆಸಿ ಮಾದರಿಯಾದ ಕಡಬದ ಮದುಮಗ

ಪುತ್ತೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮಾಹಿತಿದಾರರಾಗಿ ಸೇವೆ ಸಲ್ಲಿಸುತ್ತಿರುವ ಕಡಬದ ಕಮಾಲುದ್ದೀನ್ ರವರು ತಮ್ಮ ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಗೃತಿ

Read More
ಕರಾವಳಿ

ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ

ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಮಂಗಳೂರು ರೈಲ್ವೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿಯವರು ಇದೀಗ ಸುಳ್ಯಕ್ಕೆ ವರ್ಗಾವಣೆ

Read More
ಕರಾವಳಿ

ಅತಿಥಿ ಶಿಕ್ಷಕರ ಬಾಕಿ ವೇತನ ಶೀಘ್ರ ಬಿಡುಗಡೆಗೊಳಿಸಿ: ಎಂ.ಎ ರಫೀಕ್ ಸವಣೂರು ಆಗ್ರಹ

ಅತಿಥಿ ಶಿಕ್ಷಕರ ಬಾಕಿ ವೇತನ ಕೂಡಲೇ ಬಿಡುಗಡೆಗೊಳಿಸಿ ಆದೇಶ ಹೊರಡಿಸಬೇಕೆಂದು ಮೊಗರು ಶಾಲಾ SDMC ಅಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ ಎ ರವರು

Read More
ಕರಾವಳಿ

ಬಿಎಎಂಎಸ್ ಅಂತಿಮ ಪರೀಕ್ಷೆ:
ಡಾ.ಆಯಿಷತ್ ಮುನೀರಾ
ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

ಪುತ್ತೂರು: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಕರ್ನಾಟಕ ಬೆಂಗಳೂರು ಇದರ ಅಂತಿಮ ಹಂತದ ವೃತ್ತಪರ ಬ್ಯಾಚುರಲ್ ಆಫ್ ಆಯುರ್ವೇದಿಕ್ ಮೆಡಿಕಲ್ ಆಂಡ್ ಸರ್ಜರಿ (ಬಿಎಎಂಎಸ್)

Read More
ಕರಾವಳಿಕ್ರೈಂ

ವಿಟ್ಲದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಸುಳ್ಯದ ವ್ಯಕ್ತಿಯ ಬಂಧನ

ಕರ್ನಾಟಕ ಕೇರಳ ಗಡಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಆಟೋರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುಳ್ಯ ಬೀರಮಂಗಲ ನಿವಾಸಿ ಎನ್

Read More
ಕರಾವಳಿ

ಕುಂಬ್ರ ಸರಣಿ ಕಳ್ಳತನ: ಜನ ಜಾಗೃತಿ ಸಭೆ: ಇಲಾಖೆಯಿಂದ ಸೂಕ್ತವಾದ ತನಿಖೆ ನಡೆಯುತ್ತಿದೆ: ಡಿವೈಎಸ್‌ಪಿ ಗಾನ ಪಿ.ಕುಮಾರ್

ಪುತ್ತೂರು: ಕುಂಬ್ರದಲ್ಲಿ ಸೆ.4ರಂದು ತಡರಾತ್ರಿ ನಡೆದ ಸರಣಿ ಕಳ್ಳತನ ಹಾಗೂ ನೆರೆಯ ಗ್ರಾಮ ಬಡಗನ್ನೂರುನಲ್ಲಿ ನಡೆದ ಮನೆ ದರೋಡೆ ಸೇರಿದಂತೆ ಕಳ್ಳತನದ ಬಗ್ಗೆ ಜನಜಾಗೃತಿ ಸಭೆ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿದ್ದ ಗ್ರಾಮಸ್ಥರು ವಿವಿಧ ವಿಚಾರಗಳ ಬಗ್ಗೆ ನೀಡಿದ ಸಲಹೆ ಸೂಚನೆಗಳನ್ನು ಆಲಿಸಿದ ಪುತ್ತೂರು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಇಲಾಖೆಯಿಂದ ಸೂಕ್ತವಾದ ತನಿಖೆ ನಡೆಯುತ್ತಿದೆ. ಕುಂಬ್ರದ ಕಳ್ಳತನವನ್ನು ಗಮನಿಸಿದಾಗ ಸಿಸಿಟಿವಿ ಡಿವಿಆರ್‌ಗಳನ್ನೇ ಕಳ್ಳರು ಎಗರಿಸಿದ್ದಾರೆ. ಆದ್ದರಿಂದ ನಾವು ಸಿಸಿಟಿವಿ ಕ್ಯಾಮರ ಅಳವಡಿಸುತ್ತೇವೆ ಆದರೆ ಡಿವಿಆರ್ ಅನ್ನು ಎಲ್ಲರಿಗೆ ಕಾಣುವ ಹಾಗೆ ಇಡುತ್ತೇವೆ ಇದು ಸರಿಯಲ್ಲ, ಸಿಸಿಟಿವಿ ಡಿವಿಆರ್ ಎಲ್ಲಿ ಇಟ್ಟಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿರಬೇಕು ಅದು ಎಲ್ಲರಿಗೆ ಕಾಣುವ ಹಾಗೆ ಇಡಬಾರದು ಎಂದು ತಿಳಿಸಿದರು. ಇನ್ನು ಸಿಸಿಟಿವಿ ಕ್ಯಾಮರ ಲಿಂಕ್ ಅನ್ನು ನಮ್ಮ ಮೊಬೈಲ್‌ಗಳಿಗೆ ಅಳವಡಿಸಿಕೊಳ್ಳಬೇಕು ಒಂದು ವೇಳೆ ಡಿವಿಆರ್ ಕಳ್ಳತನವಾದರೂ ನಮ್ಮ ಮೊಬೈಲ್‌ನಲ್ಲಿ ಕಳ್ಳರ ಚಲನವಲನ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಹೆಚ್ಚಿನವರ ಮನೆಯ ಹಿಂಬದಿ ಬಾಗಿಲು ಅಷ್ಟಕಷ್ಟೇ ಇರುತ್ತದೆ. ಮನೆ ಕಟ್ಟುವಾಗ ಎದುರು ಬಾಗಿಲಿನ ಬಗ್ಗೆ ಮಾತ್ರ ನಾವು ಗಮನ ಹರಿಸುತ್ತೇವೆ ಅದನ್ನು ಭದ್ರವಾಗಿ ಮಾಡುತ್ತೇವೆ ಆದರೆ ಹಿಂಬದಿ ಬಾಗಿಲನ್ನು ಅಷ್ಟಾಗಿ ಭದ್ರ ಮಾಡುವುದಿಲ್ಲ. ಹಿಂಬದಿ ಬಾಗಿಲಿಗೆ ಒಂದು ಚಿಲಕ ಇಟ್ಟಿರುತ್ತೇವೆ ಇದು ಸರಿಯಲ್ಲ ಕಳ್ಳರು ಹೆಚ್ಚಾಗಿ ಹಿಂಬದಿ ಬಾಗಿಲನ್ನೇ ಮುರಿದು ಒಳನುಗ್ಗುತ್ತಾರೆ. ಆದ್ದರಿಂದ ಹಿಂಬದಿ ಬಾಗಿಲನ್ನು ಭದ್ರವಾಗಿ ಮಾಡುವುದು ಮುಖ್ಯ ಎಂದರು. ನಮ್ಮ ಮನೆಯ ಬಾಗಿಲಿಗೆ ಬೀಗದ ಕೀ ಬದಲು ಡೋರ್ ಲಾಕ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದು ಒಳಿತು. ಏಕೆಂದರೆ ಮನೆಯ ಬಾಗಿಲಿಗೆ ದೊಡ್ಡದಾದ ಬೀಗ ಹಾಕಿ ಹೋದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಬಹಳ ಬೇಗ ಗೊತ್ತಾಗುತ್ತದೆ ಅದರ ಬದಲು ಡೋರ್ ಲಾಕ್ ಹಾಕಿದರೆ ಮನೆಯ ಒಳಗೆ ಇದ್ದಾರೋ ಇಲ್ವೋ ಅನ್ನೋದು ಅಷ್ಟು ಬೇಗ ತಿಳಿಯುವುದಿಲ್ಲ ಎಂದರು. ಅಪರಿಚಿತರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮುನ್ನ ಅವರ ಆಧಾರ್ ಕಾರ್ಡ್ ಹಾಗೂ ಭಾವಚಿತ್ರವನ್ನು ಪಡೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಿ, ಮನೆಯಲ್ಲಿ ಹಣ, ಚಿನ್ನಾಭರಣವನ್ನು ಇಟ್ಟು ಹೊರಗಡೆ ಹೋಗಬೇಡಿ, ರಾತ್ರಿ ವೇಳೆ ನೀವು ಇಲ್ಲದಿದ್ದರೂ ನೆರೆಮನೆಯವರಲ್ಲಿ ರಾತ್ರಿ ವೇಳೆ ವಿದ್ಯುತ್ ಲೈಟ್ ಹಾಕಲು ಹೇಳಿ ಹೋಗಿ ಇದರಿಂದ ನೀವು ಮನೆಯಲ್ಲಿಯೇ ಇದ್ದೀರಿ ಎಂಬ ಭಾವನೆ ಕಳ್ಳರಿಗೆ ಬರುತ್ತದೆ ಮೊದಲಾದ ಸಲಹೆಗಳನ್ನು ಡಿವೈಎಸ್‌ಪಿ ಗಾನ ಪಿ.ಕುಮಾರ್‌ರವರು ಸಭೆಗೆ ನೀಡಿದರು. ಕಳ್ಳತನದ ವಿಚಾರದಲ್ಲಿ ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ: ಎಸ್.ಐ ಧನಂಜಯ ಬಿ.ಸಿ: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಧನಂಜಯ್‌ರವರು ಮಾತನಾಡಿ, ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಷಯ ಸೇರಿದಂತೆ ಯಾವುದೇ ವಿಷಯದಲ್ಲೂ ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿಗಳು ಹಿಂದೆ ಬಿದ್ದಿಲ್ಲ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಬೀಟ್ ಸಿಸ್ಟಮ್ ನಡೆಯುತ್ತಿದೆ. ಗ್ರಾಮದಲ್ಲಿ ಹಲವು ಬೀಟ್ ಪಾಯಿಂಟ್‌ಗಳನ್ನು ಮಾಡಿದ್ದೇವೆ ಎಂದು ಹೇಳಿದರು. ನಾನು ಕೂಡ ಪ್ರತಿದಿನ ರಾತ್ರಿ 12 ಗಂಟೆ ಸುಮಾರಿಗೆ ರೌಂಡಪ್ ಬರುತ್ತಿದ್ದೇನೆ. ಕುಟ್ಟಿನೋಪಿನಡ್ಕ, ದರ್ಬೆತ್ತಡ್ಕ ಇತ್ಯಾದಿ ಕುಗ್ರಾಮಗಳಿಗೂ ಭೇಟಿ ಕೊಡುತ್ತಿದ್ದೇನೆ. ಕೆಲವು ಕಡೆಗಳಲ್ಲಿ ನಡೆದುಕೊಂಡೇ ಹೋಗಿದ್ದೇನೆ. ಕುಂಬ್ರದಲ್ಲಿ ನಡೆದ ಸರಣಿ ಕಳ್ಳತನದ ವಿಚಾರದಲ್ಲಿ ಈಗಾಗಲೇ ತನಿಖೆ ಚುರುಕುಗೊಳಿಸಿದ್ದೇವೆ ಎಂದು ಅವರು ಹೇಳಿದರು. ಪ್ರಮುಖರಾದ ತ್ರಿವೇಣಿ ಪಳ್ಳತ್ತಾರು, ದುರ್ಗಾಪ್ರಸಾದ್ ರೈ, ಪ್ರಕಾಶ್ಚಂದ್ರ ರೈ ಕೈಕಾರ, ರತನ್ ರೈ ಕುಂಬ್ರ ಶ್ಯಾಮಸುಂದರ ರೈ, ಸುಂದರ ರೈ ಮಂದಾರ, ವಿಜಯಕುಮಾರ್ ರೈ, ಸಂತೋಷ್ ಭಂಡಾರಿ, ನಾರಾಯಣ ಪೂಜಾರಿ ಕುರಿಕ್ಕಾರ, ಬಶೀರ್ ಕಡ್ತಿಮಾರ್ ಸಹಿತ ಹಲವರು ವಿವಿಧ ಅಭಿಪ್ರಾಯ ಮಂಡಿಸಿ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ದೈವಸ್ಥಾನ, ಮಸೀದಿ, ಭಜನಾ ಮಂದಿರ ಇತ್ಯಾದಿ ಧಾರ್ಮಿಕ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ವರ್ತಕರ ಸಂಘದವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು.

Read More
ಕರಾವಳಿರಾಜಕೀಯರಾಜ್ಯ

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಬೆಳೆ ವಿಮೆ ಅವಧಿ ವಿಸ್ತರಣೆಗೆ ಶಾಸಕ ಅಶೋಕ್ ರೈಯವರಿಂದ ಮುಖ್ಯಮಂತ್ರಿಗೆ ಮನವಿ

ಪುತ್ತೂರು: ರೇಶನ್ ಕಾರ್ಡು ತಿದ್ದುಪಡಿ ಹಾಗೂ ಬೆಳೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಶಾಸಕರು ದೂರವಾಣಿ ಮೂಲಕ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ರೇಶನ್ ಕಾರ್ಡು ತಿದ್ದುಪಡಿಗೆ ನೀಡಿರುವ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು ಕೊನೇ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗಿಲ್ಲ. ಹಲವಾರು ಮಂದಿಯ ರೇಶನ್ ಕಾರ್ಡುಗಳ ತಿದ್ದುಪಡಿ ಬಾಕಿ ಇದ್ದು ತಿದ್ದುಪಡಿ ಅವಧಿ ಮುಗಿದಿರುವ ಸಮಯವನ್ನು ವಿಸ್ತರಣೆ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಳೆ ಸಮೀಕ್ಷೆ ವಿಸ್ತರಣೆಗೂ ಮನವಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳೆ ಸಮೀಕ್ಷೆಯ ಅವಧಿ ಮುಗಿದಿದ್ದು ಅದನ್ನು ವಿಸ್ತರಣೆ ಮಾಡುವಂತೆಯೂ ಸೀಎಂ ಅವರಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಬೆಳೆ ವಿಮೆಗಾಗಿ ಈಗಾಗಲೇ ಬೆಳೆ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು ಅದರ ಅವಧಿ ಸೆ.15 ರಂದು ಕೊನೆಗೊಂಡಿರುತ್ತದೆ. ಬೆಳೆ ಸಮೀಕ್ಷೆ ಇನ್ನೂ ಬಾಕಿ ಇದ್ದು ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅದರ ಅವಧಿಯನ್ನು ವಿಸ್ತರಣೆ ಮಾಡುವಂತೆಯೂ ಶಾಸಕರು ಮನವಿ ಮಾಡಿದ್ದಾರೆ. ಸ್ಪಂದನೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಮತ್ರಿಗಳು ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Read More
ಕರಾವಳಿ

ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕರನ್ನು ಸ್ವಾಗತಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ

ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿರುವ ಸಂತೋಷ್ ರವರನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಹೂಗುಚ್ಚ ನೀಡಿ ಸ್ವಾಗತಿಸುವ ಕಾರ್ಯಕ್ರಮ ಸೆಪ್ಟಂಬರ್ 15ರಂದು ನಡೆಯಿತು. ಈ

Read More
error: Content is protected !!