ಕೊಲೆಯಾದ ಅಕ್ಷಯ್ ಕಲ್ಲೇಗ ಮನೆಗೆ ಶಾಸಕ ಅಶೋಕ್ ರೈ ಭೇಟಿ, ಸಾಂತ್ವನ
ಪುತ್ತೂರು: ಹತ್ಯೆಗೀಡಾದ ಅಕ್ಷಯ್ ಕಲ್ಲೇಗ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು ಅಕ್ಷಯ್ ತನ್ನ ಗೆಳೆಯರಿಂದಲೇ ಹತ್ಯೆಯಾಗಿರುವುದು ಖೇದಕರ ವಿಚಾರ. ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು ಎಂದರು. ನಮ್ಮ ಕಾನೂನಲ್ಲಿ ಬದಲಾವಣೆ ಆಗಬೇಕಾಗಿದೆ, ಬಂಧಿತ ಆರೋಪಿಗಳು ಮೂರು ತಿಂಗಳ ಬಳಿಕ ಹೊರ ಬರದಂತೆ ಆಗಬೇಕು, ಇದಕ್ಕಾಗಿ ವಿದೇಶಗಳ ರೀತಿಯ ಕಾನೂನು ಇಲ್ಲೂ ಜಾರಿಯಾಗಬೇಕು ಎಂದು ಅವರು ಹೇಳಿದರು.