ಮಹಿಳೆಗೆ ಕಿರುಕುಳ ನೀಡಿದ ಆರೋಪಿಗೆ ದಂಡ ವಿಧಿಸಿ, ಜೈಲು ಶಿಕ್ಷೆ: ಮಂಗಳೂರು ನ್ಯಾಯಾಲಯದಿಂದ ತೀರ್ಪು
ಮಂಗಳೂರು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ, ಮಂಗಳೂರಿನ ಕಟ್ಟೆ ಪುಣಿ, ಜೆಪ್ಪಿನ ಮೊಗರು ನಿವಾಸಿ ರಾಜೇಶ್ ಎಂಬಾತ ಮಹಿಳೆಯ ಮನೆಗೆ ಬಂದು ಅಸಭ್ಯ ವಾಗಿ ವರ್ತಿಸಿ , ಮಹಿಳೆಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕದ್ರಿ ಪೋಲೀಸ್ ಠಾಣೆಯಲ್ಲಿ ಐ ಪಿ ಸಿ ಕಲಂ 354(d) ,504 ,506 ರಡಿಯಲ್ಲಿ ದೂರು ದಾಖಲಿಸಿ ಪೋಲೀಸ್ ಉಪ ನಿರೀಕ್ಷಕರಾದ ಅನಿತಾ ನಿಕ್ಕಂ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರನೆ ನಡೆಸಿದ ಮಂಗಳೂರಿನ ಆರನೇ ನ್ಯಾಯಾಲಯದ ನ್ಯಾಯಾಧೀಶರಾದ ಅಂಬ್ರಿನ್ ಸುಲ್ತಾನ ರವರು ಆರೋಪಿಯ ವಿರುದ್ಧದ ಕಲಂ 354(d) ರ ಅಪರಾಧ ಸಾಬೀತಾಗಿದೆ ಎಂದು ಅಪರಾಧಿಗೆ 1 ತಿಂಗಳು ಜೈಲು ವಾಸ ಹಾಗೂ ರೂಪಾಯಿ 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ ಭಾಗಶಃ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ನಂತರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ರವರು ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.