ಸುಳ್ಯ: ಕಲ್ಲುಗುಂಡಿಯ ಅಂಗಡಿಯೊಂದರಿಂದ ಹಂಚುಗಳನ್ನು ಕದ್ದೊಯ್ದ ಕಳ್ಳ..!
ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಸುಳ್ಯ: ಅಂಗಡಿಯೊಂದರಿಂದ ಹಂಚು ಎಗರಿಸಿ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಕಲ್ಲುಗುಂಡಿಯಿಂದ ವರದಿಯಾಗಿದೆ.

ಮಲ್ಲಿಕಾ ಟ್ರೇಡರ್ಸ್ ಮಾಲೀಕ ಗಂಗಾಧರ ಎಸ್ ಡಿ ಅವರ ಅಂಗಡಿಯಲ್ಲಿ ಹಂಚು ಕಳ್ಳತನ ಆಗಿದ್ದು ಅಂಗಡಿ ಮಾಲೀಕರು ಹಂಚುಗಳನ್ನು ಸ್ಟಾಕ್ ಇಟ್ಟ ಜಾಗದಲ್ಲಿ ಪರಿಶೀಲಿಸಿದಾಗ ಹಂಚುಗಳು ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಓಮ್ನಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹಂಚು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.