ಕರಾವಳಿ

20 ವರ್ಷಗಳಿಂದ ಫ್ಲಾಟಿಂಗ್ ಆಗುತ್ತಿಲ್ಲ..!
ನಾಲ್ಕೇ ತಿಂಗಳಲ್ಲಿ ಫ್ಲಾಟಿಂಗ್ ಫೈಲು ಕ್ಲೋಸ್ ಮಾಡಿ: ಶಾಸಕರ ಖಡಕ್ ಆದೇಶ




ಪುತ್ತೂರು: ಕಳೆದ 20 ವರ್ಷಗಳಿಂದ ಫ್ಲಾಟಿಂಗ್ ಸಮರ್ಪಕವಾಗಿ ಆಗುತ್ತಿಲ್ಲ, ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗಿದೆ, ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಪಂಚಾಯತ್‌ನಿಂದ ಡೋರ್ ನಂಬರೂ ಕೊಡುತ್ತಿಲ್ಲ, ಫ್ಲಾಟಿಂಗ್ ಆಗದೆ ಕನ್ವರ್ಶನ್ ಕೂಡಾ ಆಗುತ್ತಿಲ್ಲ ಇಷ್ಟು ವರ್ಷ ಯಾಕೆ ಪೆಂಡಿಂಗ್ ಆಗುತ್ತಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು ಕಂದಾಯ ಅಧಿಕಾರಿಗಳಿಗೆ ನಾಲ್ಕು ತಿಂಗಳ ಸಮಯವಕಾಶವನ್ನು ನೀಡಿ ಅಷ್ಟರೊಳಗೆ ಎಲ್ಲಾ ಫ್ಲಾಟಿಂಗ್ ಫೈಲ್ ವಿಲೇವಾರಿ ಮಾಡಲೇಬೇಕು ಎಂದು ಕಂದಾಯ ಅದಿಕಾರಿಗಳಿಗೆ ಖಡಕ್ ಆದೇಶವನ್ನು ನೀಡಿದ್ದಾರೆ.


ಮುಂದಿನ ನಾಲ್ಕು ತಿಂಗಳು ನಿಮಗೆ ಸಮಯವಕಾಶವನ್ನು ಕೊಡುತ್ತೇನೆ ಅಷ್ಟರೊಳಗೆ ಫೈಲ್ ಕ್ಲೋಸ್ ಮಾಡಲೇಬೇಕು ಎಂದು ಶಾಸಕರು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
94ಸಿ ಮತ್ತು 94 ಸಿಸಿ ಸೇರಿದಂತೆ ಯಾವುದೇ ಕಡತಗಳನ್ನು ನೀವಾಗಿಯೇ ರಿಜೆಕ್ಟ್ ಮಾಡಬೇಡಿ. ಫೈಲುಗಳನ್ನು ಅಥವಾ ಅರ್ಜಿಗಳನ್ನು ರಿಜೆಕ್ಟ್ ಮಾಡುವ ಮುನ್ನ ನನ್ನ ಗಮನಕ್ಕೆ ತರಬೇಕು ಅದರ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡಬೇಕು. ಬಡವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದರೆ ಅದನ್ನು ಸಕ್ರಮ ಮಡಲು ಬಡವರು ಅರ್ಜಿ ಹಾಕುತ್ತಾರೆ ಅದನ್ನು ಮೊದಲ ಅಧ್ಯತೆ ಮೇಲೆ ಪರಿಗಣಿಸಿ ಅವರನ್ನು ಸತಾಯಿಸಬೇಡಿ. ನೀವು ಹೇಳಿದ್ದು ಅರ್ಥವಾಗದೇ ಇದ್ದಾಗ ನಿಮ್ಮ ಬಳಿ ಪದೇ ಪದೇ ಬರಬಹುದು ಆವಾಗ ಅವರ ಜೊತೆ ಸೌಮ್ಯವಾಗಿ ವರ್ತಿಸಿ ಅವರಿಗೆ ವಿಷಯ ಮನದಟ್ಟು ಮಾಡಬೇಕು. ಬಡವರಿಂದ ಹಣ ಪಡೆದುಕೊಳ್ಳಬೇಡಿ. ಅಕ್ರಮ ಸಕ್ರಮ ಫೈಲುಗಳನ್ನು ಗ್ರಾಮ ಮಟ್ಟದಲ್ಲಿಯೇ ವಿಲೇವಾರಿ ಮಾಡಬೇಕು, ಫೈಲು ವಿಲೇವಾರಿಗೆ ಯಾರ ಅಪ್ಪಣೆಗೂ ಕಾಯಬೇಡಿ, ಸರಕಾರ ಬದಲಾಗಿದೆ, ಶಾಸಕರೂ ಬದಲಾಗಿದ್ದಾರೆ ಎಂಬ ಭಾವನೆ ನಿಮ್ಮಲ್ಲಿರಲಿ. ಸಾರ್ವಜನಿಕರ ಯಾವುದೇ ಕಡತಗಳು ಕಂದಾಯ ಕಚೇರಿಯಲ್ಲಿ ದೂಳು ತಿನ್ನುವಂತಾಗಬಾರದು. ಸಿಬಂದಿಗಳ ಕೊರತೆ ಇದ್ದರೆ ನನ್ನಲ್ಲಿ ಹೇಳಿ. ನಿಮಗೆ ಯಾವುದೇ ಸಮಸ್ಯೆಯಾದರೂ ನನ್ನಲ್ಲಿ ಹೇಳಿ ಎಂದು ಶಾಸಕರು ಖಡಕ್ ಸೂಚನೆಯನ್ನು ನೀಡಿದರು.


ತಾಪಂ ಸಭಾಂಗಣದಲ್ಲಿ ಆ.23 ರಂದು ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಆದೇಶವನ್ನು ನೀಡಿದ್ದಾರೆ. ಫ್ಲಾಟಿಂಗ್ ಆಗುತ್ತಿಲ್ಲ ಎಂದು ನನ್ನ ಬಳಿ ಹಲವಾರು ದೂರುಗಳು ಬಂದಿದೆ, ಫ್ಲಾಟಿಂಗ್ ಆಗದೇ ಇರುವುದು ದೊಡ್ಡ ಸಮಸ್ಯೆಯಾಗಿದೆ ಅದಕ್ಕಾಗಿಯೇ ಡಿಡಿಎಲ್‌ಆರ್, ಎಡಿಎಲ್‌ಆರ್, ಎ ಸಿ ತಹಸಿಲ್ದಾರ್, ಮತ್ತು ಗ್ರಾಮಕರಣಿಕರನ್ನು ಕರೆಸಿದ್ದೇನೆ. ನಿಮಗೆ ಫ್ಲಾಟಿಂಗ್ ಮಾಡಲು ಇರುವ ಸಮಸ್ಯೆಯಾದರೂ ಏನು ಹೇಳಿ ಎಂದು ಶಾಸಕರು ತಿಳಿಸಿದರು. ಈ ವೇಳೆ ಗ್ರಾಮಕರಣಿಕರು ಕೆಲವೊಂದು ವಿಚಾರಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.

Leave a Reply

Your email address will not be published. Required fields are marked *

error: Content is protected !!